ಧಾರ್ಮಿಕ ಕಾರ್ಯಕ್ರಮಗಳೇ ಕೋವಿಡ್ 2ನೇ ಅಲೆಗೆ ಕಾರಣ : ICMR
ನವದೆಹಲಿ : ದೇಶದಲ್ಲಿ ಕೋವಿಡ್ 2ನೇ ಅಲೆ ಭೀತಿಗೆ ಜನ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಇದಕ್ಕೆ ಕಾರಣ ಧಾರ್ಮಿಕ ಕಾರ್ಯಕ್ರಮಗಳು ( ಕುಂಭ ಮೇಳವೂ ಒಂದು ) ರಾಜಕೀಯ ಪ್ರಚಾರ ಸಭೆ ಸಮಾರಂಭಗಳು , ಹಾಗೂ ಜನರು ವಲಸೆ ಹೋಗುತ್ತಿರುವುದು ಎಂಬುದನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (IMRC) ನೇತೃತ್ವದ ಅಧ್ಯಯನ ನಡೆಸಿದ ತಂಡ ತಿಳಿಸಿದೆ.
ಈ ವರದಿ ಅನ್ವಯ ವಿದೇಶಿ ಪ್ರಯಾಣಿಕರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು, ದೇಶದಲ್ಲಿನ ಜನರು ಆಂತರಿಕವಾಗಿ ವಲಸೆ ಹೋಗಿರುವುದು ಮತ್ತು ದೇಶದಾದ್ಯಂತ ನಡೆದ ಹಲವು ಧಾರ್ಮಿಕ ಕಾರ್ಯಕ್ರಮಗಳು ಕೊರೊನಾ 2ನೇ ಅಲೆ ಹೆಚ್ಚಳಕ್ಕೆ ನೇರವಾದ ಕಾರಣ ಎಂಬ ಅಂಶವನ್ನ ತಿಳಿಸಲಾಗಿದೆ.
ಇನ್ನೂ ಮಿಂಟ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದಂತೆ ಕೊರೊನಾ ರೂಪಾಂತರಿಗಳಲ್ಲಿ ಕಂಡುಬರುತ್ತಿರುವ ಅಮೀನೋ ಆಸಿಡ್ ರೂಪಾಂತರಗಳು ಈಗ ಪ್ರಸರಣ ಹೊಂದುತ್ತಿರುವ ತಳಿಗಳಲ್ಲಿ ಹೋಸ್ಟ್ ಅಡಾಪ್ಟೇಷನ್ ಗೆ ಸಜ್ಜಾಗಿದ್ದು, ವಿಕಾಸಾತ್ಮಕ ಪ್ರವೃತ್ತಿಯತ್ತ ಮುನ್ನುಗ್ಗುತ್ತಿದೆ ಎಂದು ವರದಿ ತಿಳಿಸಿದೆ.
ಮೂರು ರೂಪಾಂತರಿಗಳಾದ ಬಿ.1.1.7 ವಂಶಾವಳಿ ಆತಂಕಕ್ಕೆ ಕಾರಣವಾಗಿದ್ದು, ಬಿ.1.351 ವಂಶಾವಳಿ ಭಾರತದಲ್ಲಿ ಹೆಚ್ಚು ಕಂಡು ಬಂದಿದ್ದು, ಆಂಟಿಜೆನಿಕ್ ಡ್ರಿಫ್ಟ್, ಹರಡುವಿಕೆ ಮತ್ತು ರೋಗನಿರೋಧಕವನ್ನೂ ಮೀರಿಸುವ ಸಾಮಥ್ರ್ಯವನ್ನು ಈ ವಂಶಾವಳಿ ಹೊಂದಿರುವುದರಿಂದ ಸೋಂಕು ಹೆಚ್ಚಳಗೊಂಡಿದೆ ಎಂದು ಐಸಿಎಂಆರ್ ಹೇಳಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








