ಇನ್ನೊಂದು ವರ್ಷದಲ್ಲಿ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ : ಕಾರಜೋಳ Karajola saaksha tv
ಬಾಗಲಕೋಟೆ : ಇನ್ನೊಂದು ವರ್ಷದಲ್ಲಿ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅವರು ಏಳು ವರ್ಷದ ಹಿಂದೆ ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಎಂದಿದ್ದರು.
ಆಗ ಕಾಂಗ್ರೆಸ್ ನವರು ಗೇಲಿ ಮಾಡಿದ್ರು. ಇವ್ರೇನು ಭವಿಷ್ಯ ಹೇಳ್ತಾರಾ? ಕಾಲಜ್ಞಾನಿಗಳಾ ಅಂದಿದ್ರು. ಈಗ ಅವರ ಮಾತು ನಿಜ ಆಗುತ್ತಿದೆ.
ಇನ್ನೊಂದು ವರ್ಷದಲ್ಲಿ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ ಎಂದು ಭವಿಷ್ಯ ನುಡಿದರು.
ಪ್ರಧಾನಿ ಬಗ್ಗೆ, ಯಡಿಯೂರಪ್ಪನವರ ಬಗ್ಗೆ, ಬೊಮ್ಮಾಯಿ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಅವರು ಬಳಸುತ್ತಿರುವ ಭಾಷೆ ಸಂಸದೀಯ ಭಾಷೆ ಅಲ್ಲ. ಅಂತಹ ಒಂದು ಕೆಟ್ಟ ನಡವಳಿಕೆ ನಾವು ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.









