Cricket : 219 ರನ್ ಗಳಿಗೆ ಭಾರತ ಅಲೌಟ್ – ಕಿವೀಸ್ ಗೆ ಸುಲಭ ಟಾರ್ಗೆಟ್…
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಬುಧವಾರ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 47.3 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 219 ರನ್ ಗಳಿಸಿತು. ಭಾರತದ ಪರ ವಾಷಿಂಗ್ಟನ್ ಸುಂದರ್ (51) ಅರ್ಧಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 49 ರನ್ ಗಳಿಸಿದರು. ನಾಯಕ ಶಿಖರ್ ಧವನ್ 28 ರನ್ ಕೊಡುಗೆ ನೀಡಿದರು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮತ್ತೊಮ್ಮೆ ರನ್ ಗಳಿಸುವಲ್ಲಿ ವಿಫಲವಾದರು. ಕೇವಲ 10 ರನ್ ಗಳಿಸಿಲಷ್ಟೆ ಶಕ್ತರಾದರು. ಶುಭಮನ್ ಗಿಲ್ 13, ಹೂಡಾ-ಚಹರ್ 12-12 ರನ್ ಸೇರಿಸಿದರು.
ಬೌಲಿಂಗ್ನಲ್ಲಿ ಕಿವೀಸ್ ಪರ ಆಡಮ್ ಮಿಲ್ನೆ ಮತ್ತು ಡೇರಿಲ್ ಮಿಚೆಲ್ 3-3 ವಿಕೆಟ್ ಕಬಳಿಸಿದರೆ, ಟಿಮ್ ಸೌಥಿ ಎರಡು ವಿಕೆಟ್ ಗಳಿಸಿದರು. ಫರ್ಗುಸನ್ ಮತ್ತು ಸ್ಯಾಂಟ್ನರ್ ಖಾತೆಗೆ ತಲಾ ಒಂದು ವಿಕೆಟ್ ಹಂಚಿಕೊಂಡರು.
ಉತ್ತರವಾಗಿ ನ್ಯೂಜಿಲೆಂಡ್ 8 ಓವರ್ಗಳಲ್ಲಿ 34 ರನ್ ಗಳಿಸಿತು. ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ಆಡುತ್ತಿದ್ದಾರೆ.
IND NZ 3rd ODI : India all out for 219 runs – easy target for Kiwis…