IND SL T20 Series : ಶ್ರೀಲಂಕಾ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವ….
ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಮಿಪೈನಲ್ ನಲ್ಲಿ ಸೋತು ಹೊರಬಂದ ಬಳಿಕ ಬಿಸಿಸಿಐ, ಮುಂದಿನ 2024ರ ವಿಶ್ವಕಪ್ ಗೆ ಎಚ್ಚರಿಕೆಯ ಹೆಜ್ಜೆಯನ್ನಿಡಲು ಮುಂದಾಗಿದೆ.
ಜನವರಿ 2023ರಲ್ಲಿ ನಡೆಯಲಿರುವ ಶ್ರೀಲಂಕ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವವನ್ನ ವಹಿಸಲಿದ್ದು ಪ್ರಸ್ತುತ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇನ್ನು ಮುಂದೆ ಭಾರತದ T20 ಯೋಜನೆಗಳ ಭಾಗವಾಗಿರುವುದಿಲ್ಲ ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ ವಹಿಸುವ ಸಾಧ್ಯತೆ ಇದೆ ಎಂದು ಇನ್ಸೈಡ್ಸ್ಪೋರ್ಟ್ ಈಗಾಗಲೇ ವರದಿ ಮಾಡಿದೆ.
ಇನ್ಸೈಡ್ಸ್ಪೋರ್ಟ್ ಗೆ ಬಿಸಿಸಿಐ ಅನೌಪಚಾರಿಕ ವಾಗಿ ಮಾತನಾಡಿ ರೋಹಿತ್, ವಿರಾಟ್, ಮೊಹಮ್ಮದ್ ಶಮಿ, ಆರ್.ಅಶ್ವಿನ್, ದಿನೇಶ್ ಕಾರ್ತಿಕ್ ಅವರನ್ನು ಭಾರತದ ಟಿ20 ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ.
ಭಾರತ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಭಾರತದ ವೈಸ್-ಕ್ಯಾಪ್ಟನ್ ಕೆಎಲ್ ರಾಹುಲ್ ಅವರು ವಿವಾಹದ ಕಾರಣದಿಂದ ಸರಣಿಯಿಂದ ಹೊರಗುಳಿಯವ ಸಾಧ್ಯತೆ ಇದೆ.
“ಹೊಸ ಆಯ್ಕೆ ಸಮಿತಿಯನ್ನ ಡಿಸೆಂಬರ್ನಲ್ಲಿ ನೇಮಕ ಮಾಡಲಾಗುತ್ತಿದ್ದು, ಅವರೇ ಭಾರತ ತಂಡದ ಬಗ್ಗೆ ಎಲ್ಲಾ ಔಪಚಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಾವು ಕೆಲವು ಹೆಸರುಗಳನ್ನ ಬಿಟ್ಟು ಮುಂದುವರಿಯಬೇಕಾಗಿದೆ ಎಂಬುದು ಖಚಿತ. ಈಗಾಗಲೇ ರೋಹಿತ್, ವಿರಾಟ್ ಜೊತೆ ಮಾತನಾಡಲಾಗಿದೆ. ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಇನ್ಸೈಡ್ಸ್ಪೋರ್ಟ್ಗೆ ತಿಳಿಸಿದ್ದಾರೆ.
KL ರಾಹುಲ್ ಮತ್ತು ರಿಷಬ್ ಪಂತ್ ಅವರನ್ನ ಹಿಂದಿಕ್ಕಿ ಹಾರ್ದಿಕ್ ಪಾಂಡ್ಯ ಮುಂಚೂಣಿಯಲ್ಲಿದ್ದು , ಬಿಸಿಸಿಐ ಶೀಘ್ರದಲ್ಲೇ ಪಾಂಡ್ಯಗೆ ಪಟ್ಟ ಕಟ್ಟುವ ಸಾಧ್ಯತೆ ಇದೆ.
IND SL T20 Series : Hardik Pandya to lead the series against Sri Lanka….