ADVERTISEMENT
Wednesday, December 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

C Dinesh by C Dinesh
November 19, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Australia

Australia

Share on FacebookShare on TwitterShare on WhatsappShare on Telegram

ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌(137) ಬೊಂಬಾಟ್‌ ಶತಕ ಹಾಗೂ ಮಾರ್ನಸ್‌ ಲಬುಶೇನ್‌(58*) ಜವಾಬ್ದಾರಿಯ ಬ್ಯಾಟಿಂಗ್‌ನಿಂದ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನ 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಸಿ ಆಲೌಟ್‌ ಆಯಿತು. ಈ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ.

ಕೈಕೊಟ್ಟ ಶುಭ್ಮನ್‌-ಶ್ರೇಯಸ್‌:
ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್‌ ಶರ್ಮ(47 ರನ್‌, 31 ಬಾಲ್‌, 4 ಬೌಂಡರಿ, 3 ಸಿಕ್ಸ್‌) ಸ್ಪೋಟಕ ಆರಂಭ ನೀಡಿದರು. ಆದರೆ ಮತ್ತೋರ್ವ ಆರಂಭಿಕ ಶುಭ್ಮನ್‌ ಗಿಲ್‌(4) ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿ ನಿರಾಸೆ ಮೂಡಿಸಿದರು. ಇವರಿಬ್ಬರ ವಿಕೆಟ್‌ ಪತನದ ಬಳಿಕ ಕಣಕ್ಕಿಳಿದ ಶ್ರೇಯಸ್‌ ಅಯ್ಯರ್‌(4) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ 10.2 ಓವರ್‌ಗಳಲ್ಲಿ 81 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Related posts

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

December 10, 2025
Suryakumar yadav

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

December 9, 2025

Virat Kohli

ವಿರಾಟ್‌-ರಾಹುಲ್‌ ಆಸರೆ:
ಆದರೆ 4ನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ(54 ರನ್‌, 63 ಬಾಲ್‌, 4 ಬೌಂಡರಿ) ಹಾಗೂ ಕೆಎಲ್‌ ರಾಹುಲ್‌(66 ರನ್‌, 107 ಬಾಲ್‌, 1 ಬೌಂಡರಿ) ಎಚ್ಚರಿಕೆಯ ಆಟದ ಮೂಲಕ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಇಬ್ಬರು ಕೂಡ ನಿರ್ಣಾಯಕ ಹಂತದಲ್ಲಿ ಔಟಾಗಿದ್ದು ಭಾರತಕ್ಕೆ ಆಘಾತ ನೀಡಿತು. ಬಳಿಕ ಕಣಕ್ಕಿಳಿದ ಜಡೇಜಾ(9), ಸೂರ್ಯಕುಮಾರ್‌(18), ಶಮಿ(6), ಬುಮ್ರಾ(1), ಕುಲ್ದೀಪ್‌(10) ಹಾಗೂ ಸಿರಾಜ್‌(9*) ತಂಡಕ್ಕೆ ಆಸರೆಯಾಗಲಿಲ್ಲ. ಇದರ ಪರಿಣಾಮ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್‌ ಆಯಿತು.

Australia

ಆಸೀಸ್‌ ಸಂಘಟಿತ ದಾಳಿ:
ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿದ ಆಸೀಸ್‌ ಪಡೆಗೆ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿದರು. ನಿರ್ಣಾಯಕ ಘಟ್ಟದಲ್ಲಿ ವಿಕೆಟ್‌ಗಳನ್ನ ಪಡೆದು ತಂಡಕ್ಕೆ ಮೇಲುಗೈ ತಂದುಕೊಡುವಲ್ಲಿ ಯಶಸ್ವಿಯಾದರು. ಪ್ರಮುಖವಾಗಿ ವೇಗಿ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌ ಪಡೆದು ಮಿಂಚಿದರೆ. ಇವರಿಗೆ ಉತ್ತಮ ಸಾಥ್‌ ನೀಡಿದ ಹೇಜಲ್ವುಡ್‌ ಹಾಗೂ ಕಮ್ಮಿನ್ಸ್‌ 2 ವಿಕೆಟ್‌ ಪಡೆದರೆ. ಮ್ಯಾಕ್ಸ್‌ವೆಲ್‌ ಹಾಗೂ ಜ್ಹಂಪ 1 ವಿಕೆಟ್‌ ಪಡೆದರು.

Travis Head

ಟ್ರಾವಿಸ್‌ ಹೆಡ್‌ ಶತಕದ ಮಿಂಚು:
ಭಾರತ ನೀಡಿದ 241 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಆಸ್ಟ್ರೇಲಿಯಾ ಕೂಡ ಆಘಾತಕಾರಿ ಆರಂಭ ಕಂಡಿತು. ಆರಂಭಿಕ ಬ್ಯಾಟರ್‌ ವಾರ್ನರ್‌(7), ಮಾರ್ಷ್‌(15) ಹಾಗೂ ಸ್ಮಿತ್‌(4) ಅವರುಗಳ ವೈಫಲ್ಯದಿಂದ 47 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಆಘಾತ ಕಂಡಿತು. ಈ ಹಂತದಲ್ಲಿ ಜೊತೆಯಾದ ಟ್ರಾವಿಡ್‌ ಹೆಡ್‌(137 ರನ್‌, 120 ಬಾಲ್‌, 15 ಬೌಂಡರಿ, 4 ಸಿಕ್ಸ್‌) ಹಾಗೂ ಮಾರ್ನಸ್‌ ಲಬುಶೇನ್‌(58* ರನ್‌, 110 ಬಾಲ್‌, 4 ಬೌಂಡರಿ) ಅದ್ಭುತ ಜೊತೆಯಾಟದ ಮೂಲಕ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಟ್ರಾವಿಸ್‌ ಹೆಡ್‌ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರೆ. ಇವರಿಗೆ ಉತ್ತಮ ಸಾಥ್‌ ನೀಡಿದ ಲಬುಶೇನ್‌ ಕೂಡ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸುವ ಮೂಲಕ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯಭೇರಿ ಬಾರಿಸಿತು. ಭಾರತದ ಪರ ಬುಮ್ರಾ 2 ವಿಕೆಟ್‌ ಪಡೆದರೆ. ಶಮಿ ಹಾಗೂ ಸಿರಾಜ್‌ ತಲಾ 1 ವಿಕೆಟ್‌ ಪಡೆದುಕೊಂಡರು. ಭರ್ಜರಿ ಬ್ಯಾಟಿಂಗ್‌ನಿಂದ ಆಸೀಸ್‌ ಗೆಲುವಿನ ಹೀರೋ ಆಗಿ ಮಿಂಚಿದ ಟ್ರಾವಿಸ್‌ ಹೆಡ್‌ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಪ್ಯಾಟ್‌ ಕಮ್ಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಗೆದ್ದುಬೀಗಿದರೆ. ತವರಿನಲ್ಲಿ 3ನೇ ಬಾರಿಗೆ ವಿಶ್ವಕಪ್‌ ಗೆಲ್ಲುವ ನಿರೀಕ್ಷೆ ಹೊಂದಿದ್ದ ಭಾರತದ ಕನಸು ಕನಸಾಗಿಯೇ ಉಳಿಯಿತು.

IND v AUS, Team India, Australia, Travis Head, ODI World Cup

Tags: AustraliaIND v AUSODI World Cupteam indiaTravis Head
ShareTweetSendShare
Join us on:

Related Posts

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

by Shwetha
December 10, 2025
0

ಕಟಕ್: ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ರುದ್ರತಾಂಡವವಾಡಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಮತೋಲಿತ ಪ್ರದರ್ಶನದೊಂದಿಗೆ ಭಾರತ ನೀಡಿದ ಬೃಹತ್...

Suryakumar yadav

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

by admin
December 9, 2025
0

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ...! ಸದ್ಯ ಟೀಮ್ ಇಂಡಿಯಾದ ಟಿ-20 ತಂಡವನ್ನು ಆಯ್ಕೆ ಮಾಡೋದೇ ಆಯ್ಕೆ ಸಮಿತಿಗೆ ದೊಡ್ಡ ತಲೆನೋವು. ಕೊನೆಗೆ ಏನೇನೋ ಸರ್ಕಸ್...

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..!

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..!

by admin
December 8, 2025
0

ಡಿಯರ್ ವೆಂಕಿ... ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ. ರಾಜ್ಯ ಹಾಗೂ ಟೀಮ್ ಇಂಡಿಯಾ ಆಟಗಾರನಾಗಿ ನೀವು ಹಲವು...

ಟೀಮ್ ಇಂಡಿಯಾದ ಪರಿಸ್ಥಿತಿ ತೀರಾ “ಗಂಭೀರ”..!

by admin
December 8, 2025
0

ಗೌತಮ್ ಗಂಭೀರ್.. ಬಹುಶಃ ಆತ ಬಿಜೆಪಿಯ ಮಾಜಿ ಸಂಸದನಾಗದೇ ಇರುತ್ತಿದ್ರೆ ಆತನ ವಿರುದ್ಧ ಟೀಕೆಗಳು ಬರುತ್ತಿರಲಿಲ್ಲವೇನೋ..!? ಹಾಗೇ ರೋಹಿತ್ - ವಿರಾಟ್ ಜೊತೆ ಉತ್ತಮ ಒಡನಾಡವಿರುತ್ತಿದ್ರೆ ಆತನನ್ನು...

ಕೆಎಸ್‌ಸಿಎ ಗದ್ದುಗೆ ಏರಿದ ವೆಂಕಟೇಶ್ ಪ್ರಸಾದ್ ಬ್ರಿಜೇಶ್ ಪಟೇಲ್ ಭದ್ರಕೋಟೆ ಛಿದ್ರ 12 ವರ್ಷಗಳ ಬಳಿಕ ರಾಜಬೀದಿಗೆ ಮರಳಿದ ಮಾಜಿ ವೇಗಿ

ಕೆಎಸ್‌ಸಿಎ ಗದ್ದುಗೆ ಏರಿದ ವೆಂಕಟೇಶ್ ಪ್ರಸಾದ್ ಬ್ರಿಜೇಶ್ ಪಟೇಲ್ ಭದ್ರಕೋಟೆ ಛಿದ್ರ 12 ವರ್ಷಗಳ ಬಳಿಕ ರಾಜಬೀದಿಗೆ ಮರಳಿದ ಮಾಜಿ ವೇಗಿ

by Shwetha
December 8, 2025
0

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಎಸ್‌ಸಿಎ ಆಡಳಿತದ ಶಕ್ತಿ ಕೇಂದ್ರವಾಗಿದ್ದ ಬ್ರಿಜೇಶ್ ಪಟೇಲ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram