ADVERTISEMENT
Monday, July 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

admin by admin
September 16, 2023
in ಕ್ರಿಕೆಟ್, Newsbeat, Sports
Share on FacebookShare on TwitterShare on WhatsappShare on Telegram

IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ…

IND v BAN: Gill, Aksar struggle in vain: India lost against Bangladesh

Related posts

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

July 27, 2026
ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

July 27, 2026

ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌(121) ಹಾಗೂ ಆಲ್ರೌಂಡರ್‌ ಅಕ್ಸರ್‌ ಪಟೇಲ್‌(42) ಹೋರಾಟದ ನಡುವೆಯೂ ಏಷ್ಯಾಕಪ್ ಪಂದ್ಯಾವಳಿಯ ಸೂಪರ್‌-4 ಹಂತದ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ 6 ರನ್‌ಗಳ ಸೋಲನುಭವಿಸಿತು. ಈ ಸೋಲಿನೊಂದಿಗೆ ರೋಹಿತ್‌ ಪಡೆ ಸೋಲಿನ ಆಘಾತದೊಂದಿಗೆ ಫೈನಲ್‌ನತ್ತ ಮುಖ ಮಾಡಿದರೆ. ಶಕೀಬ್‌ ಸಾರಥ್ಯದ ಬಾಂಗ್ಲಾ ತಂಡ ಗೆಲುವಿನ ಖುಷಿಯೊಂದಿಗೆ ತವರಿಗೆ ಹಿಂದಿರುಗುತ್ತಿದೆ.

ಸೂಪರ್‌-4ನಲ್ಲಿ ಈಗಾಗಲೇ ಸತತ ಎರಡು ಗೆಲುವಿನೊಂದಿಗೆ ಭಾರತ ತಂಡ ಫೈನಲ್‌ ಪ್ರವೇಶಿಸಿದ್ದರೆ. ಎರಡು ಸೋಲಿನ ಆಘಾತದೊಂದಿಗೆ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯ ಎರಡು ತಂಡಗಳಿಗೂ ಅನೌಪಚಾರಿಕ ಪಂದ್ಯವಾಗಿತ್ತು. ಹೀಗಾಗಿ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ ಭಾರತ ಯುವ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ನೀಡಿತ್ತು.

ಕೊಲಂಬೊದ ಆರ್​ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ, 50 ಓವರ್‌ಗಳಲ್ಲಿ 8 ವಿಕೆಟ್‌ಗೆ 265 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಬಾಂಗ್ಲಾದೇಶದ ಪರ ಶಕೀಬ್‌(80), ಹ್ರಿದೋಯ್‌(54) ಹಾಗೂ ನಸುಮ್‌ ಅಹ್ಮದ್‌(44) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡಕ್ಕೆ ಆಸರೆಯಾದರು. ಭಾರತದ ಪರ ಶಾರ್ದೂಲ್‌(3/65), ಶಮಿ(2/32) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರೆ. ಪ್ರಸಿದ್ಧ ಕೃಷ್ಣ, ರವೀಂದ್ರ ಜಡೇಜಾ ಹಾಗೂ ಅಕ್ಸರ್‌ ಪಟೇಲ್‌ ತಲಾ 1 ವಿಕೆಟ್‌ ಪಡೆದರು.

ಬಾಂಗ್ಲಾ ತಂಡದ 266 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇನ್ನಿಂಗ್ಸ್‌ ಆರಂಭಿಸಿದ ಭಾರತ ಮೊದಲ ಓವರ್‌ನಲ್ಲೇ ನಾಯಕ ರೋಹಿತ್‌ ಶರ್ಮಾ(0) ವಿಕೆಟ್‌ ಕಳೆದುಕೊಂಡಿತು. ನಂತರ ಬಂದ ತಿಲಕ್‌ ವರ್ಮಾ(5) ತಮ್ಮ ಚೊಚ್ಚಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ಶುಭ್ಮನ್‌ ಗಿಲ್‌ 57 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬೌಲಿಂಗ್‌ ದಾಳಿಗಿಳಿದ ಮೆಹಿದಿ ಹಸನ್‌ ಉತ್ತಮವಾಗಿ ಆಡುತ್ತಿದ್ದ ರಾಹುಲ್(19) ಅವರ ವಿಕೆಟ್‌ ಪಡೆದು ತಂಡಕ್ಕೆ ಮೇಲುಗೈ ನೀಡಿದರು. ಬಳಿಕ ಕಣಕ್ಕಿಳಿದ ಸೂರ್ಯಕುಮಾರ್ (26), ರವೀಂದ್ರ ಜಡೇಜಾ(7) ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಆದರೆ ಒಂದೆಡೆ ವಿಕೆಟ್‌ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ಶುಭ್ಮನ್‌ ಗಿಲ್‌(121) ಭರ್ಜರಿ ಬ್ಯಾಟಿಂಗ್‌ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕ ಸಿಡಿಸಿ ಮಿಂಚಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಗಿಲ್‌ ನಿರ್ಣಾಯಕ ಹಂತದಲ್ಲಿ ತಮ್ಮ ವಿಕೆಟ್‌ ಕೈಚಲ್ಲಿದರು. ಕೊನೆಯಲ್ಲಿ ಜೊತೆಯಾದ ಅಕ್ಷರ್‌ ಪಟೇಲ್‌(42) ಮತ್ತು ಶಾರ್ದುಲ್‌ ಥಾಕೂರ್‌(11) ಹೋರಾಟ ನಡೆಸಿದರು ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. ಪರಿಣಾಮ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್‌ ಆಗಿ 6 ರನ್‌ಗಳ ಸೋಲು ಕಂಡಿತು.

ಬಾಂಗ್ಲಾ ಪರ ಮುಸ್ತಫಿಜು಼ರ್‌ 3 ವಿಕೆಟ್‌ ಪಡೆದರೆ, ತಂಜಿ಼ಮ್‌ ಹಾಗೂ ಮೆಹಿದಿ ತಲಾ 2 ವಿಕೆಟ್‌ ಪಡೆದರು. ಜವಾಬ್ದಾರಿಯ ಆಟದ ಮೂಲಕ ತಂಡದ ಗೆಲುವಿಗೆ ಕಾರಣವಾದ ನಾಯಕ ಶಕೀಬ್‌-ಅಲ್‌-ಹಸನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Tags: Asia CupBangladeshIND v BANindiasports karnataka
ShareTweetSendShare
Join us on:

Related Posts

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

by admin
July 27, 2026
0

ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ...

ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

by Shwetha
July 27, 2026
0

ಧಾರವಾಡ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ (ಆಪ್) ನೈತಿಕತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ....

ಡಿಸಿಎಂ ಹುದ್ದೆಗಾಗಿ ನಾನು ಲಾಬಿ ಮಾಡಿಲ್ಲ- ನೀಟ್ ಹಗರಣ: ಮೋದಿಯ ಯುಗ ಅಂತ್ಯದ ಮುನ್ಸೂಚನೆ- ಎಂ.ಬಿ.ಪಾಟೀಲ್

ಡಿಸಿಎಂ ಹುದ್ದೆಗಾಗಿ ನಾನು ಲಾಬಿ ಮಾಡಿಲ್ಲ- ನೀಟ್ ಹಗರಣ: ಮೋದಿಯ ಯುಗ ಅಂತ್ಯದ ಮುನ್ಸೂಚನೆ- ಎಂ.ಬಿ.ಪಾಟೀಲ್

by Shwetha
July 27, 2026
0

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಮತ್ತು ಸಚಿವ ಸಂಪುಟ ವಿಸ್ತರಣೆಯ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ...

ಕಾಕ್ರೋಚ್ ಪಡೆಯ ನಾಟಕ ಬಯಲು- ಮೋದಿಯವರ ಮೌನವೇ ಮಹಾನ್ ಅಸ್ತ್ರ: ಅಸಲಿ ಗೆಲುವು ಬಿಜೆಪಿಯದ್ದೇ ಎಂದು ಸಾರುತ್ತಿದೆ ಸೋಷಿಯಲ್ ಮೀಡಿಯಾ!

ಕಾಕ್ರೋಚ್ ಪಡೆಯ ನಾಟಕ ಬಯಲು- ಮೋದಿಯವರ ಮೌನವೇ ಮಹಾನ್ ಅಸ್ತ್ರ: ಅಸಲಿ ಗೆಲುವು ಬಿಜೆಪಿಯದ್ದೇ ಎಂದು ಸಾರುತ್ತಿದೆ ಸೋಷಿಯಲ್ ಮೀಡಿಯಾ!

by Shwetha
July 27, 2026
0

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ...

UP ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್: ಅಖಿಲೇಶ್ ಯಾದವ್ ಗೆ ಓವೈಸಿ ಫ್ರೆಂಡ್ ರಿಕ್ವೆಸ್ಟ್! ಭಾಯಿಜಾನ್ ಗಳ ಮೈತ್ರಿ ಪ್ರಸ್ತಾಪಕ್ಕೆ ಬಿಜೆಪಿಯ ವ್ಯಂಗ್ಯದ ಏಟು

UP ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್: ಅಖಿಲೇಶ್ ಯಾದವ್ ಗೆ ಓವೈಸಿ ಫ್ರೆಂಡ್ ರಿಕ್ವೆಸ್ಟ್! ಭಾಯಿಜಾನ್ ಗಳ ಮೈತ್ರಿ ಪ್ರಸ್ತಾಪಕ್ಕೆ ಬಿಜೆಪಿಯ ವ್ಯಂಗ್ಯದ ಏಟು

by Shwetha
July 27, 2026
0

ಲಕ್ನೋ: ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. 2027ರ ವಿಧಾನಸಭಾ ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದ್ದರೂ, ವಿರೋಧ ಪಕ್ಷಗಳು ಈಗಲೇ ಮೈತ್ರಿ ಮಂತ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram