ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಮೂಲಕ ಟೀಂ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವೇಗದ ಬೌಲರ್ ಶಮಿ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲೂ ಮಾರಕ ಬೌಲಿಂಗ್‌ನಿಂದ ಮಿಂಚಿದರು. ಇನ್ನಿಂಗ್ಸ್‌ನ ಆರಂಭದ ಮೊದಲ ಬಾಲ್‌ನಲ್ಲೇ ಡೆವೋನ್ ಕಾನ್ವೆ ವಿಕೆಟ್ ಪಡೆದ ಶಮಿ, ನಂತರ ರಚಿನ್ ರವೀಂದ್ರ ವಿಕೆಟ್ ಪಡೆದು ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ ಇನ್ನಿಂಗ್ಸ್‌ನ 33ನೇ ಓವರ್‌ನಲ್ಲಿ ಕೇನ್ ವಿಲಿಯಂಸನ್ ಹಾಗೂ ಟಾಪ್ ಲಾಥಮ್ ಅವರ ವಿಕೆಟ್‌ಗಳನ್ನ ಪಡೆಯುವ ಮೂಲಕ ಅಬ್ಬರಿಸಿದರು. ಇದರೊಂದಿಗೆ ಕೇವಲ 17 ಇನ್ನಿಂಗ್ಸ್‌ಗಳಲ್ಲಿ 51* ವಿಕೆಟ್ ಪಡೆಯುವ ಮೂಲಕ 48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್‌ಗಳನ್ನ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಡೆದು ಹೊಸ ಇತಿಹಾಸ ನಿರ್ಮಿಸಿದರು.
ಪ್ರಸಕ್ತ ವಿಶ್ವಕಪ್‌ನಲ್ಲಿ ಸರ್ವಶ್ರೇಷ್ಠ ಫಾರ್ಮ್‌ನಲ್ಲಿರುವ ಮೊಹಮ್ಮದ್ ಶಮಿ, ಆರಂಭಿಕ ನಾಲ್ಕು ಪಂದ್ಯಗಳಿಂದ ಪ್ಲೇಯಿಂಗ್ ಇಲವೆನ್‌ನಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಶಮಿ, ತಮಗೆ ಸಿಕ್ಕ ಅವಕಾಶವನ್ನ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 20* ವಿಕೆಟ್‌ಗಳನ್ನ ಪಡೆದು ಹೆಚ್ಚು ವಿಕೆಟ್‌ಗಳನ್ನ ಪಡೆದ ಬೌಲರ್‌ಗಳ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌ಗಳು:
ಮೊಹಮ್ಮದ್ ಶಮಿ – 17 ಇನ್ನಿಂಗ್ಸ್
ಮಿಚೆಲ್ ಸ್ಟಾರ್ಕ್ – 19 ಇನ್ನಿಂಗ್ಸ್
ಲಸಿತ್ ಮಲಿಂಗ – 25 ಇನ್ನಿಂಗ್ಸ್
ಟ್ರೆಂಟ್ ಬೋಲ್ಟ್ – 28 ಇನ್ನಿಂಗ್ಸ್
IND v NZ, Team India, Mohammed Shami, ODI Cricket, World Cup