ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v NZ: ಶಮಿ ಮಿಂಚಿನ ದಾಳಿ, ಕೊಹ್ಲಿ ಅಬ್ಬರ: ಕಿವೀಸ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

ಸತತ 5ನೇ ಗೆಲುವಿನೊಂದಿಗೆ ಮಿಂಚಿದ ಟೀಂ ಇಂಡಿಯಾ

C Dinesh by C Dinesh
October 22, 2023
in Sports, ಕ್ರಿಕೆಟ್ ವಿಶ್ವಕಪ್ 2023
Team India

Team India

Share on FacebookShare on TwitterShare on WhatsappShare on Telegram

ಭಾರತ ತಂಡದ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ(95) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಏಕದಿನ ವಿಶ್ವಕಪ್‌ ಟೂರ್ನಿಯ ನ್ಯೂಜಿ಼ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ಸತತ 5ನೇ ಗೆಲುವಿನೊಂದಿಗೆ ಜಯದ ನಾಗಾಲೋಟ ಮುಂದುವರಿಸಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಅವಕಾಶ ಪಡೆದ ನ್ಯೂಜಿ಼ಲೆಂಡ್‌ 50 ಓವರ್‌ಗಳಲ್ಲಿ 273 ರನ್‌ಗಳಿಸಿ ಸರ್ವಪತನ ಕಂಡಿತು. ಕಿವೀಸ್‌ ನೀಡಿದ ಟಾರ್ಗೆಟ್‌ ಚೇಸ್‌ ಮಾಡಿದ ಭಾರತ 48 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 274 ರನ್‌ಗಳಿಸಿ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಸತತ 5ನೇ ಗೆಲುವು ಸಾಧಿಸಿತು.

Related posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

June 24, 2026
fifa wolrd cup football 2026

FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

June 23, 2026

Daryl Mitchell

ಮಿಚೆಲ್‌ ಶತಕದ ಮಿಂಚು:
ಮೊದಲು ಬ್ಯಾಟ್‌ ಮಾಡಿದ ನ್ಯೂಜಿ಼ಲೆಂಡ್‌ ಕೇವಲ 19 ರನ್‌ಗಳಿಗೆ ಡೆವೊನ್‌ ಕಾನ್ವೆ(0) ಹಾಗೂ ವಿಲ್‌ ಯಂಗ್‌(17) ಅವರುಗಳ ವಿಕೆಟ್‌ ಕಳೆದುಕೊಂಡು ಆಘಾತ ಕಂಡಿತು. ಆದರೆ ಈ ಹಂತದಲ್ಲಿ ಜೊತೆಯಾದ ರಚಿನ್‌ ರವೀಂದ್ರ(75) ಹಾಗೂ ಡೆರಿಲ್‌ ಮಿಚೆಲ್‌(130) ಅದ್ಭುತ ಆಟದ ಮೂಲಕ ಮಿಂಚಿದರು. ಭಾರತದ ಬೌಲಿಂಗ್‌ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಮಿಚೆಲ್‌, ಏಕದಿನ ವಿಶ್ವಕಪ್‌ನ ತಮ್ಮ ಮೊದಲ ಹಾಗೂ ಪ್ರಸಕ್ತ ವರ್ಷದಲ್ಲಿ 4ನೇ ಶತಕ ದಾಖಲಿಸಿದರು. ಆದರೆ ನಂತರ ಬಂದ ಯಾವುದೇ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಕಿವೀಸ್‌ ಪಡೆ 273 ರನ್‌ಗಳಿಗೆ ಆಲೌಟ್‌ ಆಯಿತು.

Mohammed Shami

ಶಮಿ ಮಿಂಚಿನ ದಾಳಿ:
ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವಾಡಿದ ಮೊಹಮ್ಮದ್‌ ಶಮಿ, ಅತ್ಯುತ್ತಮ ಬೌಲಿಂಗ್‌ನಿಂದ ಕಿವೀಸ್‌ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಮೊಹಮ್ಮದ್‌ ಶಮಿ, 10 ಓವರ್‌ಗಳಲ್ಲಿ 54 ರನ್‌ ನೀಡಿ 5 ವಿಕೆಟ್‌ಗಳನ್ನ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಕುಲ್ದೀಪ್‌ 2, ಬುಮ್ರಾ ಹಾಗೂ ಸಿರಾಜ್‌ ತಲಾ 1 ವಿಕೆಟ್‌ ಪಡೆದು ಮಿಂಚಿದರು.

Virat Kohli

ಕಿಂಗ್‌ ಕೊಹ್ಲಿ ಕಮಾಲ್‌:
ನ್ಯೂಜಿ಼ಲೆಂಡ್‌ ನೀಡಿದ 274 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಭಾರತ, ಸಂಘಟಿತ ಬ್ಯಾಟಿಂಗ್‌ ಪ್ರದರ್ಶಿಸಿತು. ಇನ್ನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮ(46) ಹಾಗೂ ಶುಭ್ಮನ್‌ ಗಿಲ್‌(26) ಮೊದಲ ವಿಕೆಟ್‌ಗೆ 71 ರನ್‌ಗಳ ಉತ್ತಮ ಆರಂಭ ನೀಡಿದರು. ಆದರೆ ಇವರಿಬ್ಬರ ವಿಕೆಟ್‌ ಪತನದ ಬಳಿಕ ಕಣಕ್ಕಿಳಿದ ವಿರಾಟ್‌ ಕೊಹ್ಲಿ(95 ರನ್‌, 104 ಬಾಲ್‌, 8 ಬೌಂಡರಿ, 2 ಸಿಕ್ಸ್‌) ಅದ್ಭುತ ಆಟವಾಡಿದರು. ಜವಾಬ್ದಾರಿಯ ಬ್ಯಾಟಿಂಗ್‌ ಮೂಲಕ ಚೇಸ್‌ ಮಾಸ್ಟರ್‌ ಎಂಬುದನ್ನ ಸಾಬೀತುಪಡಿಸಿದ ಕಿಂಗ್‌ ಕೊಹ್ಲಿ, ಭಾರತವನ್ನ ಗೆಲುವಿನ ದಡಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಹ್ಲಿ ಅವರ ಜೊತೆಗೆ ಶ್ರೇಯಸ್‌ ಅಯ್ಯರ್‌(33), ರಾಹುಲ್‌(27) ಹಾಗೂ ಜಡೇಜಾ(39*) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರೆ. ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯವಾಡಿದ ಸೂರ್ಯಕುಮಾರ್‌(2) ನಿರಾಸೆ ಮೂಡಿಸಿದರು. ಕಿವೀಸ್‌ ಪರ ಫರ್ಗುಸನ್‌ 2 ವಿಕೆಟ್‌ ಪಡೆದರೆ. ಬೋಲ್ಟ್‌, ಹೆನ್ರಿ ಹಾಗೂ ಸ್ಯಾಂಟ್ನರ್‌ ತಲಾ 1 ವಿಕೆಟ್‌ ಪಡೆದರು.

ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಉತ್ತಮ ಬೌಲಿಂಗ್‌ನಿಂದ ಮಿಂಚಿದ ಮೊಹಮ್ಮದ್‌ ಶಮಿ, ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಭಾರತ ಅ.29ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನ ಎದುರಿಸಲಿದೆ.

IND v NZ, Team India, New Zealand, World Cup, ODI Cricket

Tags: IND v NZNew ZealandODI cricketteam indiaWorld Cup
ShareTweetSendShare
Join us on:

Related Posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

by admin
June 24, 2026
0

  ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...

fifa wolrd cup football 2026

FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

by admin
June 23, 2026
0

FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್‍ಬಾಲ್ ಮೈದಾನ. 105 ಮೀಟರ್...

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

by admin
June 23, 2026
0

ಇದು ಬರೀ ಒಂದು ಫುಟ್‍ಬಾಲ್ ಕಥೆಯಲ್ಲ..! ಒಬ್ಬ ಕ್ರಾಂತಿಕಾರಿ ಕಾಲ್ಚೆಂಡು ಆಟಗಾರನ ಬದುಕಿನ ಯಾನ. ಆಟದ ಜೊತೆಗೆ ವರ್ಣಭೇದ ನೀತಿಯ ವಿರುದ್ದ ಹೋರಾಡುತ್ತಿರುವ ಧೀರ ಸೇನಾನಿಯ ಬದುಕಿನ...

ವೈಭವ್‌ ಸೂರ್ಯವಂಶಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬಗು.. ವಿಶ್ವ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದಾನೆ ಬಾಲ ಸೂರ್ಯ..!

by admin
June 22, 2026
0

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬ..! ಎಂಥವರನ್ನು ನಿಬ್ಬೆರಾಗಿಸುವಂತಹ ಸ್ಫೋಟಕ ಬ್ಯಾಟಿಂಗ್..!ಮೈದಾನದ ಮೂಲೆಮೂಲೆಗಳಲ್ಲಿ ಪಸರಿಸುತ್ತದೆ ಕ್ರಿಕೆಟ್ ಆಟದ ಅಸಲಿ ರಂಗು..! ಹೊಡಿಬಡಿ ಆಟಕ್ಕೂ ಜೈ, ಕೆಣಕಿದ್ರೆ ಹೊಡೆದಾಟಕ್ಕೂ...

Alphonso Davies canad footballer

ಬಂದೂಕಿನ ಸದ್ದುಗಳ ನಡುವೆ ಹುಟ್ಟಿದ್ದ ಮಗು.., ಇಂದು ಫುಟ್‍ಬಾಲ್ ಜಗತ್ತಿನ ಧ್ರುವ ನಕ್ಷತ್ರ..!

by admin
June 22, 2026
0

ಇದು ಖಂಡಿತವಾಗಿಯೂ ಕಾಲ್ಪನಿಕ ಕಥೆಯಲ್ಲ. ನಮ್ಮ ಕಣ್ಣೆದುರೇ ನೋಡುತ್ತಿರುವ, ನಡೆದ, ನಡೆಯುತ್ತಿರುವ ವಾಸ್ತವ ಚಿತ್ರಣಗಳ ಅಕ್ಷರ ರೂಪವಷ್ಟೇ. ಬಂದೂಕಿನ ಸದ್ದುಗಳ ನಡುವೆ, ರಕ್ತದ ಮಡುವಿನಲ್ಲೇ ಹುಟ್ಟಿದ್ದ ಮಗು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram