ಟೀಂ ಇಂಡಿಯಾದ ಬೌಲರ್ಗಳ ಸಂಘಟಿತ ದಾಳಿಗೆ ತತ್ತರಿಸಿದ ಪಾಕಿಸ್ತಾನ ಬ್ಯಾಟರ್ಗಳು ಏಕದಿನ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ 191 ರನ್ಗಳಿಗೆ ಸರ್ವಪತನ ಕಂಡಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ 42.5 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್ ಆಯಿತು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅಜೇಯ ಗೆಲುವಿನ ದಾಖಲೆ ಹೊಂದಿರುವ ಭಾರತಕ್ಕೆ ಇದೀಗ 192 ರನ್ಗಳ ಟಾರ್ಗೆಟ್ ಎದುರಾಗಿದೆ.
ಬಾಬರ್-ರಿಜ್ವಾನ್ ಆಸರೆ:
ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಆರಂಭಿಕರಾದ ಶಫೀಕ್(20) ಹಾಗೂ ಇಮಾಮ್(36) ಮೊದಲ ವಿಕೆಟ್ಗೆ 41 ರನ್ಗಳ ಜೊತೆಯಾಟವಾಡಿದರು. ನಂತರ 3ನೇ ವಿಕೆಟ್ಗೆ ಜೊತೆಯಾದ ನಾಯಕ ಬಾಬರ್ ಆಜ಼ಂ(50) ಹಾಗೂ ವಿಕೆಟ್-ಕೀಪರ್ ಮೊಹಮ್ಮದ್ ರಿಜ್ವಾನ್(49) 82 ರನ್ಗಳ ಉಪಯುಕ್ತ ರನ್ಗಳಿಸಿ ತಂಡಕ್ಕೆ ಆಸರೆಯಾದರು.
ಚಾಣಾಕ್ಷ ಬೌಲಿಂಗ್ ದಾಳಿ:
ಕೇವಲ 2 ವಿಕೆಟ್ಗೆ 155 ರನ್ಗಳಿಸಿದ್ದ ಭಾರತಕ್ಕೆ ಬೌಲರ್ಗಳು ಚಾಣಾಕ್ಷ ದಾಳಿಯ ಮೂಲಕ ಆಸರೆಯಾದರು. ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಭಾರತೀಯ ಬೌಲರ್ಗಳ ಮುಂದೆ ಪಾಕಿಸ್ತಾನದ ಬ್ಯಾಟರ್ಗಳು ಉತ್ತರವಿಲ್ಲದೆ ಶರಣಾದರು. ಒಂದು ಹಂತದಲ್ಲಿ 2 ವಿಕೆಟ್ಗೆ 155 ರನ್ಗಳಿಸಿದ್ದ ಪಾಕ್ ಪಡೆ ಕೇವಲ 36 ರನ್ಗಳಿಗೆ 8 ವಿಕೆಟ್ಗಳನ್ನ ಕಳೆದುಕೊಂಡು ಆಘಾತ ಕಂಡಿತು. ಭಾರತದ ಸಂಘಟಿತ ಬೌಲಿಂಗ್ ದಾಳಿಯ ನಲುಗಿದ ಪಾಕಿಸ್ತಾನ 191 ರನ್ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ಗಳನ್ನ ಪಡೆಯುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾದರು.
IND v PAK, Team India, Pakistan, ODI Cricket, World Cup