IND v SL 2023 : ವಾಂಖೆಡೆಯಲ್ಲಿನ T20I ದಾಖಲೆ ಮತ್ತು ಅಂಕಿಅಂಶಗಳು
ಏಷ್ಯಾದ ಬಲಿಷ್ಠ ತಂಡಗಳಾದ ಭಾರತ ಹಾಗೂ ಶ್ರೀಲಂಕಾ ತಂಡಗಳು ಹೊಸ ವರ್ಷದ ಆರಂಭದಲ್ಲೇ ಟಿ20 ಕ್ರಿಕೆಟ್ ಸಮರಕ್ಕೆ ಸಜ್ಜಾಗಿದ್ದು, ಟೂರ್ನಿಯ ಆರಂಭಿಕ ಪಂದ್ಯಕ್ಕಾಗಿ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
2022ರಲ್ಲಿ ನಡೆದ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ವಿಫಲವಾಗಿತ್ತು. ಮತ್ತೊಂದೆಡೆ ಶ್ರೀಲಂಕಾ ಸಹ ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲುವ ಮೂಲಕ ಪ್ರಶಸ್ತಿ ಕೈಚಲ್ಲಿತ್ತು. ಕಳೆದ ವರ್ಷದಲ್ಲಿ ಎದುರಾದ ಸೋಲಿನ ಕಹಿ ನೆನಪುಗಳನ್ನ ಬದಿಗಿಟ್ಟಿರುವ ಎರಡು ತಂಡಗಳು ಹೊಸ ಹುರುಪಿನೊಂದಿಗೆ ವರ್ಷಾರಂಭ ಮಾಡಲು ಭರ್ಜರಿ ತಯಾರಿ ಮಾಡಿಕೊಂಡಿವೆ.
ಭಾರತ v ಶ್ರೀಲಂಕಾ T20I ಮುಖಾಮುಖಿ:
ಭಾರತ ಹಾಗೂ ಶ್ರೀಲಂಕಾ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಂ ಇಂಡಿಯಾದ ಪ್ರಾಬಲ್ಯ ಜೋರಾಗಿದ್ದು, ಭಾರತ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ. ಶ್ರೀಲಂಕಾ 8 ಪಂದ್ಯಗಳಲ್ಲಿ ಜಯದ ನಗೆಬೀರಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ವಾಂಖೆಡೆಯಲ್ಲಿ T20I ದಾಖಲೆ:
ಮುಂಬೈನ ವಾಂಖೆಡೆ ಕ್ರೀಡಾಂಗಣ ಹಲವು ಮಹತ್ವದ ಕ್ರಿಕೆಟ್ ಕದನಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ಕ್ರೀಡಾಂಗಣದಲ್ಲಿ ವೇಗದ ಬೌಲರ್ಗಳ ಪ್ರಾಬಲ್ಯ ಹೆಚ್ಚಿದ್ದು ಒಟ್ಟು 51 ವಿಕೆಟ್ಗಳನ್ನ ಕಬಳಿಸಿದ್ದರೆ. ಸ್ಪಿನ್ನರ್ಗಳು 21 ವಿಕೆಟ್ಗಳನ್ನ ಪಡೆದಿದ್ದಾರೆ. ವಾಂಖೆಡೆಯಲ್ಲಿ ಮೊದಲ ಬ್ಯಾಟಿಂಗ್ನ ಗರಿಷ್ಠ ಸ್ಕೋರ್ 180+ ರನ್ಗಳಾಗಿದ್ದು, ಒಟ್ಟು 5 ಬಾರಿ ಈ ಮೊತ್ತ ದಾಖಲಾಗಿದೆ.
ಭಾರತ ಹಾಗೂ ಶ್ರೀಲಂಕಾ ತಂಡಗಳು 5 ವರ್ಷಗಳ ಹಿಂದೆ ಕೊನೆಯ ಬಾರಿಗೆ ವಾಂಖೆಡೆಯಲ್ಲಿ ಟಿ20 ಪಂದ್ಯದಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ 135/7 ರನ್ಗಳಿಸಿತ್ತು. ಭಾರತ ಈ ಮೊತ್ತವನ್ನ ಕೊನೆಯ ಓವರ್ಗಳಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿತ್ತು.