ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v SL: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಮುರಿದ ವೇಗಿ ಮೊಹಮ್ಮದ್‌ ಶಮಿ

ಲಂಕಾ ವಿರುದ್ಧ 5 ವಿಕೆಟ್‌ ಪಡೆದು ಮಿಂಚಿದ ವೇಗದ ಬೌಲರ್‌

C Dinesh by C Dinesh
November 2, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Mohammed Shami

Mohammed Shami

Share on FacebookShare on TwitterShare on WhatsappShare on Telegram

ಐಸಿಸಿ ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನದಿಂದ ಮಿಂಚಿದ ವೇಗಿ ಮೊಹಮ್ಮದ್‌ ಶಮಿ(5/18) ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಮುರಿದಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಶಮಿ, ಪ್ರಮುಖ 5 ವಿಕೆಟ್‌ಗಳನ್ನ ಪಡೆದು ಅಬ್ಬರಿಸಿದರು. ಆ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು. ಅಲ್ಲದೇ ಈ ಪ್ರದರ್ಶನದ ಮೂಲಕ ಏಕದಿನ ವಿಶ್ವಕಪ್‌ನ ಹಲವು ದಾಖಲೆಗಳನ್ನ ಬರೆದು ಗಮನ ಸೆಳೆದರು. ಈ ಪ್ರದರ್ಶನದಿಂದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Mohammed Shami

ಪ್ರಮುಖವಾಗಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಹೆಚ್ಚು ವಿಕೆಟ್‌(45 ವಿಕೆಟ್‌) ಪಡೆದು ಮಿಂಚಿದರಲ್ಲದೆ, ಭಾರತದ ಮಾಜಿ ಕ್ರಿಕೆಟಿಗರಾದ ಜಾವಗಲ್‌ ಶ್ರೀನಾಥ್‌(44 ವಿಕೆಟ್‌) ಹಾಗೂ ಜಹೀರ್‌ ಖಾನ್‌(44 ವಿಕೆಟ್‌) ಅವರುಗಳ ಜಂಟಿ ದಾಖಲೆಯನ್ನ ಹಿಂದಿಕ್ಕಿದರು. ಇದಲ್ಲದೇ ಏಕದಿನ ವಿಶ್ವಕಪ್‌ನಲ್ಲಿ 7ನೇ ಬಾರಿ 4 ವಿಕೆಟ್‌ಗಳನ್ನ ಪಡೆದ ಶಮಿ, ಆ ಮೂಲಕ ಹೆಚ್ಚು ಬಾರಿ 4 ವಿಕೆಟ್‌ ಪಡೆದ ಹೆಗ್ಗಳಿಕೆ ಪಡೆದರು.

Related posts

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026
hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

August 6, 2026

ಇನ್ನೂ ಪ್ರಸಕ್ತ ವಿಶ್ವಕಪ್‌ನಲ್ಲಿ 2ನೇ ಬಾರಿಗೆ 5 ವಿಕೆಟ್‌ಗಳನ್ನ ಪಡೆದು ಮಿಂಚಿದ ಮೊಹಮ್ಮದ್‌ ಶಮಿ, ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ 5 ವಿಕೆಟ್‌ಗಳನ್ನ ಪಡೆದ ಮಿಚೆಲ್‌ ಸ್ಟಾರ್ಕ್‌(3 ಬಾರಿ) ಅವರ ದಾಖಲೆಯನ್ನ ಸರಿಗಟ್ಟಿದರು. ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ 4ನೇ ಬಾರಿಗೆ 5 ವಿಕೆಟ್‌ ಪಡೆದುಕೊಂಡರಲ್ಲದೇ, ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ 14ನೇ ಬಾರಿಗೆ 4 ವಿಕೆಟ್‌ಗಳನ್ನ ಪಡೆದುಕೊಂಡರು.

IND v SL, Team India, Sri Lanka, Mohammad Shami, ODI Cricket

Tags: IND v SLmohammad shamiODI cricketSri Lankateam india
ShareTweetSendShare
Join us on:

Related Posts

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

by admin
August 6, 2026
0

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...

sports/rishabh-pant-meets-ms-dhoni-ahead-of-sri-lanka-test-

ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

by admin
August 4, 2026
0

ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ....

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

by admin
August 4, 2026
0

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ...

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

by admin
August 4, 2026
0

ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram