ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ತಮ್ಮ ಕ್ರಿಕೆಟ್ ವೃತ್ತಿ ಬದುಕಿನ ಮತ್ತೊಂದು ಮೈಲುಗಲ್ಲಿನತ್ತ ಕಣ್ಣಿಟ್ಟಿದ್ದಾರೆ.
ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆಡಿರುವ ಆರು ಪಂದ್ಯಗಳಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್ ಮೂಲಕ ಟೀಂ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ನವೆಂಬರ್ 2ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೊಂದಿಗೆ ತಯಾರಿ ಮಾಡಿಕೊಂಡಿದ್ದಾರೆ.

ಪ್ರಮುಖವಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ವಿರುದ್ಧ 4000 ರನ್‌ಗಳ ಗಡಿದಾಟುವತ್ತ ಕಿಂಗ್ ಕೊಹ್ಲಿ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ 34 ವರ್ಷದ ಚೇಸ್ ಮಾಸ್ಟರ್ ಕೊಹ್ಲಿ ಅವರಿಗೆ 70 ರನ್‌ಗಳ ಅಗತ್ಯವಿದೆ. ಲಂಕಾ ವಿರುದ್ಧ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ “ಕ್ರಿಕೆಟ್ ದೇವರು” ಸಚಿನ್ ತೆಂಡುಲ್ಕರ್, ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಆಡಿರುವ 109 ಪಂದ್ಯಗಳಲ್ಲಿ ಸಚಿನ್ ತೆಂಡುಲ್ಕರ್, 49.11ರ ಸರಾಸರಿಯಲ್ಲಿ 5108 ರನ್‌ಗಳಿಸಿದ್ದಾರೆ.
ಇವರ ನಂತರದ ಸ್ಥಾನದಲ್ಲಿರುವ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ಶ್ರೀಲಂಕಾ ವಿರುದ್ಧ ಈವರೆಗೂ ಆಡಿರುವ 71 ಪಂದ್ಯಗಳಲ್ಲಿ 64.42ರ ಬ್ಯಾಟಿಂಗ್ ಸರಾಸರಿಯೊಂದಿಗೆ 3930 ರನ್‌ಗಳಿಸಿದ್ದಾರೆ. ಇದರಲ್ಲಿ 15 ಶತಕ ಹಾಗೂ 17 ಅರ್ಧಶತಕ ಬಾರಿಸಿದ್ದಾರೆ. ಹೀಗಾಗಿ ತಮಗೆ ಅಗತ್ಯವಿರುವ 70 ರನ್‌ಗಳನ್ನ ಬಾರಿಸುವ ನಿರೀಕ್ಷೆಯೊಂದಿಗೆ ಕಿಂಗ್ ಕೊಹ್ಲಿ ಲಂಕಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ.
IND v SL, Virat Kohli, Sri Lanka, Team India, ODI World Cup








