ind-vs-aus-2nd-t20 ಟೀಂ ಇಂಡಿಯಾಗೆ ಗುಡ್ ನ್ಯೂಸ್
ನಾಗ್ಪುರ್ ವೇದಿಕೆಯಾಗಿ ಆಸ್ಟ್ರೆಲಿಯಾ ವಿರುದ್ಧ ನಡೆಯಲಿರುವ ಎರಡನೇ ಟಿ 20 ಪಂದ್ಯಕ್ಕೂ ಮುನ್ನಾ ಟೀಂ ಇಂಡಿಯಾ ಗುಡ್ ನ್ಯೂಸ್ ಸಿಕ್ಕಿದೆ.
ಗಾಯದ ಕಾರಣದಿಂದ ಮೊದಲ ಟಿ 20 ಪಂದ್ಯದಿಂದ ದೂರವಾಗಿದ್ದ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ ಪ್ರಿತ್ ಬುಮ್ರಾ, ಈಗ ಪೂರ್ತಿ ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಅವರು ಎರಡನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ.
ಈ ವಿಷಯವನ್ನು ಭಾರತದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ದೃಢೀಕರಿಸಿದ್ದಾರೆ.
ಗುರುವಾರ ಪ್ರಿ ಮ್ಯಾಚ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಸೂರ್ಯ ಮಾತನಾಡಿ, ಜಸ್ ಪ್ರಿತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ನೆಟ್ ಗಳಲ್ಲಿ ಬುಮ್ರಾ ತೀವ್ರವಾಗಿ ಕೃಷಿ ಮಾಡುತ್ತಿದ್ದಾರೆ.
ಅವರು ನಾಗ್ಪುರ ಮ್ಯಾಚ್ ನಲ್ಲಿ ತಂಡದಲ್ಲಿ ಕಾಣಿಕೊಳ್ಳುವುದು ಪಕ್ಕಾ.
ಪ್ರಸ್ತುತ ತಂಡದಲ್ಲಿ ಎಲ್ಲರೂ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಅಂದಹಾಗೆ ಮೊದಲ ಮ್ಯಾಚ್ ನಲ್ಲಿ ಬುಮ್ರಾ ಬದಲಿಗೆ ಉಮೇಶ್ ಯಾದವ್ ಅವರಿಗೆ ಅವಕಾಶ ನೀಡಲಾಗಿತ್ತು.
ಉಮೇಶ್ ಯಾದವ್ ಮೂರು ವಿಕೆಟ್ ಪಡೆದು ಮಿಂಚಿದರು.