IND vs AUS : ಬಣ್ಣ ಹಚ್ಚಿ ಕುಣಿದು ಕುಪ್ಪಳಿಸಿದ ವಿರಾಟ್, ರೋಹಿತ್ ಬಳಗ…
ದೇಶಾದ್ಯಂತ ಹೋಳಿ ಆಚರಣೆಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರು ಸಹ ಸಂಭ್ರಮದಿಂದ ಹೋಳಿ ಆಚರಿಸಿದ್ದಾತೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಇತರ ಆಟಗಾರರು ಹೋಳಿ ಆಚರಿಸಿದ್ದಾರೆ. ಆಟಗಾರರು ಹೋಳಿ ಆಚರಿಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
ಗುರುವಾರದಿಂದ ಭಾರತ-ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯಗಳು ನಡೆಯುತ್ತಿವೆ. ಮಂಗಳವಾರ ಸ್ಟೇಡಿಯಂಗೆ ಆಗಮಿಸುವಾಗ ಬಸ್ ನಲ್ಲಿ ಆಟಗಾರರು ಹೋಳಿ ಆಚರಿಸಿದ್ದಾರೆ.
Virat Kohli and team India fully enjoying Holi. pic.twitter.com/XiognDen5G
— Mufaddal Vohra (@mufaddal_vohra) March 7, 2023
ಪರಸ್ಪರ ಬಣ್ಣ ಎರಚಿಕೊಂಡಿರುವ ಆಟಗಾರರು ಸಂಭ್ರಮದಿಂದ ಹೋಳಿ ಆಚರಿಸಿದ್ದಾರೆ. ಕೊಹ್ಲಿ ಹಾಡು ಹೇಳುತ್ತಾ ಬಣ್ಣ ಎರಚಿದ್ದಾರೆ. ಕೊಹ್ಲಿ ಬೆನ್ನಲ್ಲೇ ರೋಹಿತ್ ಶರ್ಮಾ ಸಹ ಕೊಹ್ಲಿ ಮೇಲೆ ಬಣ್ಣ ಎರಚಿ ಡ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯವನ್ನ ಯುವ ಆಟಗಾರ ಶುಭಮನ್ ಗಿಲ್ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್, ಕೊಹ್ಲಿ ಜೊತೆಗೆ ಇತರ ಆಟಗಾರರು ಬಣ್ಣ ಹಚ್ಚಿ ಕುಣಿದು ಕುಪ್ಪಳಿಸಿದ್ದಾರೆ.
ಗುರುವಾರದಿಂದ ನಡೆಯಲಿರುವ ಪಂದ್ಯಕ್ಕೆ ಪ್ರಧಾನಿ ಮೋದಿ ಸಹ ಆಗಮಿಸಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಜೊತೆಗೆ ಪಂದ್ಯದ ನೇರ ಪ್ರಸಾರವನ್ನ ವೀಕ್ಷಿಸಲಿದ್ದಾರೆ. ನಾಲ್ಕು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಈ ಪಂದ್ಯ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಸರಣಿ ಗೆಲ್ಲಲಿದೆ. ಸೋತರೆ ಸರಣಿ ಸಮಬಲವಾಗಲಿದೆ.
IND vs AUS: Virat, Rohit’s team who painted and danced… IND vs AUS: Virat, Rohit’s team who painted and danced…