IND vs BNG : ಎರಡನೇ ಟೆಸ್ಟ್ ಪಂದ್ಯದಿಂದಲೂ ನಾಯಕ ರೋಹಿತ್ ಔಟ್..
ಹೆಬ್ಬೆರಳು ಗಾಯದಿಂದ ಚೇತರಿಸಿಕೊಳ್ಳವಲ್ಲಿ ನಾಯಕ ರೋಹಿತ್ ಶರ್ಮಾ ವಿಫಲರಾಗಿರುವುದರಿಂದ ಆತಿಥೇಯ ಬಾಂಗ್ಲಾ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಡಿ.22ರಿಂದ ಮೀರ್ಪುರ್ನಲ್ಲಿ ಆರಂಭವಾಗಲಿರುವ ಎರಡನೆ ಟಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
ಹೆಬ್ಬೆಳಿಗೆ ಗಾಯಮಾಡಿಕೊಂಡು ಮೊದಲ ಟೆಸ್ಟ್ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ ಹೊರ ನಡೆದಿದ್ದರು. ನಂತರ ಮೊದಲ ಟೆಸ್ಟ್ ಮುಗಿದಾಗ ರೋಹಿತ್ ಶರ್ಮಾ ಆಡುತ್ತಾರೆ ಎಂದು ಹೇಳಲಾಗುತ್ತಿತ್ತು.ಇದೀಗ ಬಿಸಿಸಿಐ ವೈದ್ಯಕೀಯ ತಂಡ ರೋಹಿತ್ ಹೆಬ್ಬೆರಳಿನ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದೆ.
ಹೆಬ್ಬೆರಳು ಗಾಯದಿಂದ ಚೇತರಿಸಿಕೊಳ್ಳಲು ಇನ್ನು ಸ್ವಲ್ಪ ಸಮಯ ಬೇಕಾಗುತ್ತದೆ. ಪುನರ್ವಸತಿಯಲ್ಲಿ ರೋಹಿತ್ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ್ ತಂಡ ಹೇಳಿದೆ.
ಎರಡನೆ ಟೆಸ್ಟ್ ಪಂದ್ಯಕ್ಕೆ ಕೆ.ಎಲ್.ರಾಹುಲ್ ನಾಯಕರಾಗಿ ಮುಂದುವರೆಯಲಿದ್ದಾರೆ. ರೋಹಿತ್ ಸ್ಥಾನದಲ್ಲಿ ಯುವ ಬ್ಯಾಟರ್ ಶುಭಮನ್ ಗಿಲ್ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೋರ್ವ ವೇಗಿ ನವದೀಪ್ ಸೈನಿ ಕೂಡ ಸ್ನಾಯು ನೋವಿಗೆ ಗುರಿಯಾಗಿದ್ದಾರೆ. IND vs BNG : Captain Rohit out from the second test match..