INDvsENG 3rd T20; ಆಂಗ್ಲರಿಗೆ 17 ರನ್ ಜಯ – ಸರಣಿ ಭಾರತದ ಕೈ ವಶ
ಸೂರ್ಯಕುಮಾರ್ ಯಾದವ್ ಸ್ಪೋಟಕ ಶತಕದ ಹೊರತಾಗಿಯೂ 3ನೇ ಟಿ20 ಪಂದ್ಯವನ್ನ ಗೆಲ್ಲವಲ್ಲಿ ಭಾರತ ವಿಫಲವಾಗಿದೆ. ಇಂಗ್ಲೆಂಡ್ ನ್ನ ಕ್ಲೀನ್ ಸ್ವೀಪ್ ಮಾಡುವ ಕನಸು ಹಾಗೇ ಉಳಿದಿದ್ದು ಭಾರತ 2-1 ರಿಂದ ಸರಣಿಯನ್ನ ವಶ ಪಡಿಸಿಕೊಂಡಿದೆ. ನಾಟಿಂಗ್ಹ್ಯಾಮ್ನಲ್ಲಿ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ 17 ರನ್ಗಳಿಂದ ಭಾರತವನ್ನು ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಭಾರತ ತಂಡ 20 ಕಡೆಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಸೂರ್ಯಕುಮಾರ್ 55 ಎಸೆತಗಳಲ್ಲಿ 117 ರನ್ ಗಳಿಸಿದರು. ಇದರಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ಗಳು ಸೇರಿದ್ದವು. ಶ್ರೇಯಸ್ ಅಯ್ಯರ್ 28 ರನ್ ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್ಮನ್ ಸೂರ್ಯಕುಮಾರ್ಗೆ ಬೆಂಬಲ ನೀಡಲಿಲ್ಲ. ಮೊದಲೆರಡು ಪಂದ್ಯಗಳನ್ನು ಭಾರತ ಗೆದ್ದಿತ್ತು. ಈ ಮೂಲಕ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.
ಅಗ್ರ ಬ್ಯಾಟ್ಸಮನ್ ಗಳು ವಿಫಲ
ಕಳೆದ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ಪೆವಿಲಿಯನ್ ಪೆರೆಡ್ ನಡೆಸಿತು. ರಿಷಬ್ ಪಂತ್ (1), ವಿರಾಟ್ ಕೊಹ್ಲಿ (11) ಮತ್ತು ನಾಯಕ ರೋಹಿತ್ ಶರ್ಮಾ (11) ಅಗ್ಗದ ಮೊತ್ತಕ್ಕೆ ಪೆವಿಲಿಯನ್ಗೆ ಮರಳಿದರು. ಇದಾದ ನಂತರ ಸೂರ್ಯಕುಮಾರ್ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನ ಉಳಿಸಿಕೊಂಡರು. 19ನೇ ಓವರ್ನ ಐದನೇ ಎಸೆತದಲ್ಲಿ ಔಟಾದರು.
ಡೇವಿಡ್ ಮಲಾನ್ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದರು. 39 ಎಸೆತಗಳಲ್ಲಿ 77 ರನ್ಗಳ ಇನಿಂಗ್ಸ್ ಆಡಿದರು. ಅದೇ ವೇಳೆ ಲಿಯಾಮ್ ಲಿವಿಂಗ್ ಸ್ಟನ್ ಅವರ ಬ್ಯಾಟ್ ಕೂಡ ಬಿರುಸಿನ ಮಾತುಗಳನ್ನಾಡಿತು ಕೇವಲ 29 ಎಸೆತಗಳಲ್ಲಿ 42 ರನ್ ಗಳಿಸಿದರು. ಟೀಂ ಇಂಡಿಯಾ ಪರ ರವಿ ಬಿಷ್ಣೋಯ್ ಮತ್ತು ಹರ್ಷಲ್ ಪಟೇಲ್ ತಲಾ ಎರೆಡೆರೆಡು ವಿಕೆಟ್ ಪಡೆದರು.
ಬಟ್ಲರ್ ಫ್ಲಾಫ್ ಶೋ
IPL ನಲ್ಲಿ ಮಿಂಚಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಜೋಸ್ ಬಟ್ಲರ್ ಇಂಗ್ಲೆಂಡ್ ನೆಲದಲ್ಲಿ ನೀರಸ ಪ್ರದರ್ಶನ ಮೂಡಿಸಿದ್ದಾರೆ. 3ನೇ ಟಿ20ಯಲ್ಲಿ ಇಂಗ್ಲೆಂಡ್ ನಾಯಕನ ಬ್ಯಾಟ್ ನಿಂದ ರನ್ ಹರಿದು ಬರಲಿದೆ ಎನಿಸಿತ್ತಾದರೂ ಮತ್ತೊಮ್ಮೆ ವಿಫಲರಾಗಿದ್ದಾರೆ. 9 ಎಸೆತಗಳಲ್ಲಿ 18 ರನ್ ಗಳಿಸಿ ಆಡುತ್ತಿದ್ದ ಬಟ್ಲರ್ ಅವೇಶ್ ಖಾನ್ ಎಸೆತದಲ್ಲಿ ಬೌಲ್ಡ್ ಆದರು.