IND vs ENG : ಅದ್ಭುತ ಫಾರ್ಮ್ ನಲ್ಲಿದ್ದಾಗ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಯಾಕೆ ?
ಸದ್ಯ ಅದ್ಭುತ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಯುವ ಬ್ಯಾಟರ್ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್ ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆರ್ ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ 20 ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಸೂರ್ಯ ಕುಮಾರ್ ಯಾದವ್ ( 117 ) ರನ್ ಅದ್ಭುತ ಇನ್ನಿಂಗ್ಸ್ ಆಡಿದರು.
ಆದ್ರೆ ಏಕದಿನ ಮ್ಯಾಚ್ ನಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಸೂರ್ಯ 27 ರನ್ ಗಳನ್ನ ಗಳಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಬಂದ ಪಂತ್ ಶೂನ್ಯಕ್ಕೆ ಔಟ್ ಆದ್ರು.
ಹೀಗಾಗಿ ಸೂರ್ಯ ಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರಬೇಕು.
ಒಬ್ಬ ಬ್ಯಾಟರ್ ಫಾರ್ಮ್ ನಲ್ಲಿದ್ದಾಗ ಆತನ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಕೂಡದು.
ಇನ್ನು ಕೊಹ್ಲಿ ತಂಡಕ್ಕೆ ಲಭ್ಯವಿಲ್ಲದಿದ್ದಾಗ ಮೂರನೇ ಸ್ಥಾನದಲ್ಲಿ ರಾಹುಲ್ ಗೆ ಅವಕಾಶ ನೀಡಬೇಕು.
ಅದೇ ರೀತಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೇ ಮಿಡಲ್ ಆರ್ಡರ್ ಬ್ಯಾಟರ್ ಗಳು ಇನ್ನಿಂಗ್ಸ್ ಕಟ್ಟಬೇಕು ಎಂದು ಆರ್ ಪಿ ಸಿಂಗ್ ಹೇಳಿದ್ದಾರೆ.