IND vs SA | ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ
ದಕ್ಷಿಣ ಆಫ್ರಿಕಾ ವಿರುದ್ಧ ಲಕ್ನೋ ವೇದಿಕೆಯಾಗಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದಾನೆ.
ಮಳೆಯ ಕಾರಣ ಈ ಪಂದ್ಯ ವಿಳಂಬವಾಗಿದೆ. ಶಡ್ಯೂಲ್ ಪ್ರಕಾರ ಮಧ್ಯಾಹ್ನ ಒಂದು ಗಂಟೆಗೆ ಟಾಸ್ ನಡೆಯಬೇಕಿತ್ತು.
ಆದ್ರೆ ಮಳೆ ಬಂದ ಕಾರಣ 1 : 30ಕ್ಕೆ ಟಾಸ್ ಆಗಲಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿತ್ತು.

ಆದರೇ ಮತ್ತೆ ಮಳೆ ಬರುತ್ತಿರುವ ಕಾರಣ ಪಂದ್ಯ ಮತ್ತಷ್ಟು ವಿಳಂಬವಾಗಲಿದೆ.
ರೋಹಿತ್ ಶರ್ಮಾ ನೇತೃತ್ವದ ಸಿನಿಯರ್ ಟೀಂ ಇಂಡಿಯಾ ಟಿ 20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾಗೆ ಹೋಗಿದೆ.
ಹೀಗಾಗಿ ಶಿಖರ್ ಧವನ್ ನೇತೃತ್ವದಲ್ಲಿ ಭಾರತ ದ್ವಿತೀಯ ಶ್ರೇಣಿ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
ಈ ಸರಣಿಗಾಗಿ ಸ್ವದೇಶಿ ಟೂರ್ನಿಗಳಲ್ಲಿ ಮಿಂಚುತ್ತಿರುವ ರಜತ್ ಪಟಿದಾರ್, ಮುಖೇಶ್ ಕುಮಾರ್ ಅವರನ್ನು ಮೊದಲ ಬಾರಿ ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.