Washington Sundar | ದೀಪಕ್ ಚಹಾರ್ ಬದಲಿಗೆ ವಾಷಿಂಗ್ ಟನ್ ಸುಂದರ್
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದಾಗಿ ದೂರವಾಗಿರುವುದು ಗೊತ್ತಿರುವ ವಿಚಾರವೇ.
ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯ ಇನ್ನುಳಿದ ಪಂದ್ಯಗಳಿವೆ ದೀಪಕ್ ಚಹಾರ್ ದೂರವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ದೀಪಕ್ ಚಹಾರ್ ಬದಲಿಗೆ ಇನ್ನುಳಿದ ಎರಡು ಪಂದ್ಯಗಳಿಗೆ ಆಲ್ ರೌಂಡರ್ ವಾಷಿಂಗ್ ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಂಜೂರಿಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಸುಂದರ್ ಟೀಂ ಇಂಡಿಯಾದಿಂದ ದೂರವಾಗಿದ್ದಾರೆ.
ಇಲ್ಲಿಯವರೆಗೂ ಸುಂದರ್ ಟೀಂ ಇಂಡಿಯಾ ಪರ ನಾಲ್ಕು ಏಕದಿನ ಪಂದ್ಯಗಳನ್ನ ಮಾತ್ರ ಆಡಿದ್ದಾರೆ.
ಅವರು ಕೊನೆಯದಾಗಿ ಈ ವರ್ಷ ಫೆಬ್ರವರಿಯಲ್ಲಿ ವಿಂಡೀಸ್ ವಿರುದ್ಧ ಭಾರತ ಪರ ಏಕದಿನ ಪಂದ್ಯವನ್ನಾಡಿದರು.
ಇನ್ನು ಸದ್ಯ ಗಾಯಗೊಂಡಿರುವ ದೀಪಕ್ ಚಹಾರ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಲ್ಲಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಅವರು ರವಿ ಬಿಷ್ನೋಯಿ ಬದಲಾಗಿ ವಾಷಿಂಗ್ ಟನ್ ಸುಂದರ್ ಆಡುವ ಸಾಧ್ಯತೆಗಳಿವೆ.
ಭಾರತ ಸಂಭಾವ್ಯ ತಂಡ
ಶಿಖರ್ ಧವನ್, ಶುಭ್ ಮನ್ ಗಿಲ್, ರಜತ್ ಪಟಿದಾರ್ / ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್, ಸಂಜು ಸ್ಯಾಮ್ ಸನ್, ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್, ರವಿ ಬಿಷ್ಣೋಯಿ / ವಾಷಿಂಗ್ ಟನ್ ಸುಂದರ್, ಮೊಹ್ಮದ್ ಶಮಿ, ಅವೇಶ್ ಖಾನ್