IND vs SA : ಟೀಂ ಇಂಡಿಯಾ ಸೋಲಿಗೆ ಕ್ಯಾಚ್ ಬಿಟ್ಟಿದ್ದೇ ಕಾರಣ

1 min read
ind vs sa i-knew-i-had-make-india-pay-rassie-van-der-dussen saaksha tv

ind vs sa i-knew-i-had-make-india-pay-rassie-van-der-dussen saaksha tv

ಟೀಂ ಇಂಡಿಯಾ ಸೋಲಿಗೆ ಕ್ಯಾಚ್ ಬಿಟ್ಟಿದ್ದೇ ಕಾರಣ

ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ಏಳು ವಿಕೆಟ್ ಗಳ ಜಯ ಸಾಧಿಸಿದೆ.

ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಮಿಡಲ್ ಆರ್ಡರ್ ಬ್ಯಾಟರ್ ಗಳಾದ ಮಿಲ್ಲರ್ ಮತ್ತು ವಾನ್ ಡೆರ್ ಸನ್ ಪ್ರಮುಖ ಪಾತ್ರ ವಹಿಸಿದ್ದರು.

212 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಮೊದಲು ನಿರೀಕ್ಷಿತ ಮಟ್ಟದ ಆರಂಭ ದೊರೆಯಲಿಲ್ಲ.

ಟಾಪ್ ಆರ್ಡರ್ ಬ್ಯಾಟರ್ ಗಳು ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ಆದ್ರೆ ನಾಲ್ಕನೇ ವಿಕೆಟ್ ಗೆ ಮಿಲ್ಲರ್, ವಾನ್ ಡೆರ್ ಡನೆಸ್ ಅದ್ಭುತ ಪ್ರದರ್ಶನ ನೀಡಿದರು. ಮಿಲ್ಲರ್ 64 ರನ್, ವಾನ್ ಡೆರ್ 75 ರನ್ ಗಳಿಸಿದರು.

ಆದ್ರೆ ವಾನ್ ಡೆರ್ ಡಸೆನ್ 29 ರನ್ ಗಳಿಸಿದ್ದಾಗ ಸುಲಭ ಕ್ಯಾಚ್ ಅನ್ನು ಶ್ರೇಯಸ್ ಮಿಸ್ ಮಾಡಿದರು. ಇದು ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.  

ind vs sa i-knew-i-had-make-india-pay-rassie-van-der-dussen saaksha tv
ind vs sa i-knew-i-had-make-india-pay-rassie-van-der-dussen saaksha tv

ಜೀವದಾನ ಪಡೆದ ನಂತರ ಆಫ್ರಿಕಾ ಬ್ಯಾಟರ್  ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ನೀಡಿದರು. ಮೊದಲ 30 ಎಸೆತಗಳಲ್ಲಿ 29 ರನ್ ಮಾಡಿದ್ದ ಕೊನೆಯ 16 ಎಸೆತಗಳಲ್ಲಿ 46 ಚಚ್ಚಿದರು.

ಮ್ಯಾಚ್ ಮುಗಿದ ಬಳಿಕ ಮಾತನಾಡಿದ ಡಸನ್,  ಆರಂಭದಲ್ಲಿ ಎಸೆತಗಳನ್ನು ಎದುರಿಸಲು ಸ್ವಲ್ಪ ತೊಂದರೆ ಆಗುತ್ತಿತ್ತು. ಮೊದಲು ಬೌಂಡರಿಗಳನ್ನು ಹೊಡೆಯಲಾಗದೇ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದೆ.

ಆದ್ರೆ ನಾನು ಫಾರ್ಮ್ ಪಡೆದುಕೊಳ್ಳಲು ಒಬ್ಬ ಬೌಲರ್ ಅನ್ನು ಟಾರ್ಗೆಟ್ ಮಾಡಬೇಕು ಎಂದುಕೊಂಡೆ. ವಿಕೆಟ್ ಬ್ಯಾಟಿಂಗ್ ಗೆ ತುಂಬಾ ಚೆನ್ನಾಗಿತ್ತು.

ನನ್ನ ಕ್ಯಾಚ್ ಬಿಟ್ಟಿದ್ದು, ನನಗೆ ಕೂಡಿ ಬಂತು. ಕೆಲವು ಸಂದರ್ಭದಲ್ಲಿ ಅದೃಷ್ಟ ನಮ್ಮ ಪರವಾಗಿರುತ್ತದೆ. ಈ ದಿನ ನಾನು ಅದೃಷ್ಠವಂತ ಎಂದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd