IND vs SA Series : T20 ಸರಣಿಗೆ ಭಾರತ ಸಜ್ಜು.. ಆಫ್ರಿಕಾಗೆ ಅವರದ್ದೆ ಚಿಂತೆ
ಐಪಿಎಲ್ ಹಂಗಾಮದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಟೀಂ ಇಂಡಿಯಾ ಸಜ್ಜಾಗಿದ್ದು, ತವರಿನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಅಭ್ಯಾಸ ಆರಂಭಿಸಿದೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ಅಭ್ಯಾಸ ಮಾಡುತ್ತಿದೆ. ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಟೀಂ ಇಂಡಿಯಾದ ಆಟಗಾರರು ಪಳಗುತ್ತಿದ್ದಾರೆ.
ಮುಖ್ಯವಾಗಿ ಈ ಸರಣಿಯಲ್ಲಿ ಕೆಲವು ಆಟಗಾರರ ಮೇಲೆ ಪ್ರೇಕ್ಷಕರ ಚಿತ್ತ ನೆಟ್ಟಲಿದೆ. ಅದರಲ್ಲಿ ಮೊದಲನೇ ಸ್ಥಾನದಲ್ಲಿರುವುದು ದಿನೇಶ್ ಕಾರ್ತಿಕ್.
ಹೌದು..! ಮೂರು ವರ್ಷಗಳ ಬಳಿಕ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ. ಅವರು ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ವಾಪಾಸಾಗಿದ್ದು, ಫಿನಿಷರ್ ಆಗಿ ಆಡುವುದು ಖಚಿತ.
ಇನ್ನು ಇಶಾನ್ ಕಿಶನ್ , ಆವೇಶ್ ಖಾನ್, ಋುತುರಾಜ್ ಗಾಯಕ್ವಾಡ್, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್ ಸೇರಿದಂತೆ ಹಲವು ಯುವ ಆಟಗಾರರು ವಿಶ್ವಕಪ್ಗೆ ಸ್ಥಾನ ಗಟ್ಟಿ ಮಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ.
ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತೀಯ ಸ್ಪಿನ್ನರ್ ಗಳ ಬಗ್ಗೆ ಹೆಚ್ಚು ತಲೆ ಕಡೆಸಿಕೊಂಡಿದೆ.
ಯಜುವೇಂದ್ರ ಚಹಲ್ ಮತ್ತು ಕುಲ್ ದೀಪ್ ಯಾದವ್ ವಿರುದ್ಧ ಸರಿಯಾಗಿ ಆಡಿದರೆ ಸರಣಿ ನಮ್ಮದೇ ಅಂತ ದಕ್ಷಿಣ ಆಫ್ರಿಕಾ ಯೋಚನೆ ಮಾಡಿದೆ.
ಯುಜವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ಮ್ಯಾಜಿಕ್ಗೆ ಫುಲ್ ಸ್ಟಾಪ್ ಹಾಕಲು ಭಾರೀ ರಣತಂತ್ರ ರೂಪಿಸಿದೆ.

ಈ ಕುಲ್ಚಾ ಜೋಡಿ ಜೊತೆಯಾಗಿ ಟೀಂ ಇಂಡಿಯಾಗೆ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದೆ. ಐಪಿಎಲ್ ನಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದು, ಇಬ್ಬರೂ ಸೇರಿ ಒಟ್ಟು 48 ವಿಕೆಟ್ ಪಡೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಚಹಲ್ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಧರಿಸಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಕುಲ್ದೀಪ್ ಯಾದವ್ 21 ಕಬಳಿಸಿ ಮಿಂಚಿದ್ರು.
ಹೀಗಾಗಿ ಭಾರತದಲ್ಲಿ ಈ ಸರಣಿ ನಡೆಯುತ್ತಿರುವುದರಿಂದ ಕುಲ್ಚಾ ಜೋಡಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಗಳಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಅಂದಹಾಗೆ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ತನಕ ಟೀಮ್ ಇಂಡಿಯಾ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಸರಣಿ ಸೋತಿಲ್ಲ. ಅದನ್ನು ಮುಂದುವರಸಿಕೊಂಡು ಹೋಗುವ ಪ್ಲಾನ್ ಮಾಡುತ್ತಿದೆ.
ಇತ್ತ ಭಾರತ ತಂಡ ಕೂಡ ತವರಿನಲ್ಲಿ ಸರಣಿ ಗೆಲುವಿನ ದಾಖಲೆ ಮುಂದುವರೆಸುವ ತವಕದಲ್ಲಿದೆ. ಹೀಗಾಗಿ ಇಂಡೋ – ಆಫ್ರಿಕಾ ಟಿ 20 ಸರಣಿ ಭಾರಿ ಕುತೂಹಲ ಕೆರಳಿಸಿದೆ.
ಕೆ ಎಲ್ ರಾಹುಲ್(ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್,








