IND vs SA : ಟೀಂ ಇಂಡಿಯಾ ಸೋಲಿಗೆ ಕಾರಣ ಬಿಚ್ಚಿಟ್ಟ ಗವಾಸ್ಕರ್
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಗಳನ್ನು ಸೋತಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 211 ರನ್ ಗಳಿಸಿತ್ತು.
ಆದ್ರೂ ಈ ರನ್ ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ.
ಇದಾದ ಬಳಿಕ ಕಟಕ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 149 ರನ್ ಗಳಿಸಿತ್ತು.
ಇಲ್ಲಿ ಭಾರತೀಯ ಬೌಲರ್ ಗಳ ಪೈಕಿ ಭುವನೇಶ್ವರ್ ಕುಮಾರ್ ಒಬ್ಬರೇ ಉತ್ತಮ ಪ್ರದರ್ಶನ ನೀಡಿದ್ರು.
ಪವರ್ ಪ್ಲೇ ನಲ್ಲಿ ಭುವಿ ಆಫ್ರಿಕಾ ತಂಡಕ್ಕೆ ಮುಳುವಾದರು. ಆದ್ರೆ ಇನ್ನುಳಿದ ಬೌಲರ್ ಗಳು ತೀವ್ರ ನಿರಾಸೆ ಮೂಡಿಸಿದರು.
ಮುಖ್ಯವಾಗಿ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ದುಬಾರಿಯಾದರು.
ಅದರಲ್ಲೂ ಬೌಲಿಂಗ್ ಗೆ ಸಹಾಯವಾಗುವ ಪಿಚ್ ನಲ್ಲಿ ಹಾರ್ದಿಕ್ ಪಾಂಡ್ಯ ರನ್ ಗಳಿಗೆ ಕಡಿವಾಣ ಹಾಕಲೇ ಇಲ್ಲ.

ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್,ಭಾರತೀಯ ಬೌಲರ್ ಗಳ ಬಗ್ಗೆ ತೀವ್ರ ಅಸಮಧಾನ ಹೊರಹಾಕಿದ್ದಾರೆ.
ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬಿಟ್ಟು ವಿಕೆಟ್ ಪಡೆಯುವ ಬೌಲರ್ ಗಳು ತಂಡದಲ್ಲಿಲ್ಲ. ಇದೇ ಟೀಂ ಇಂಡಿಯಾ ಸೋಲಿಗೆ ಪ್ರಧಾನ ಕಾರಣ ಎಂದಿದ್ದಾರೆ.
ಸರಿಯಾದ ಸಂದರ್ಭದಲ್ಲಿ ವಿಕೆಟ್ ಪಡೆದಿದ್ದರೇ ಎದುರಾಳಿ ತಂಡಯನ್ನು ಒತ್ತಡಕ್ಕೆ ಗುರಿಯಾಗುತ್ತಿತ್ತು. ಆದ್ರೆ ಎರಡು ಪಂದ್ಯಗಳಲ್ಲೂ ಭುವನೇಶ್ವರ್ ಕುಮಾರ್ ಬಿಟ್ಟು ಬೇರೆ ಯಾರೂ ಕೂಡ ವಿಕೆಟ್ ಪಡೆಯುವ ರೀತಿ ಕಾಣಿಸಲಿಲ್ಲ.
ಭುವನೇಶ್ವರ್ ಕುಮಾರ್ ಅದ್ಭುತವಾಗಿ ಸ್ವಿಂಗ್ ಮಾಡಿದ್ರು. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 211 ರನ್ ಗಳಿಸಿದ್ದರೂ ಡಿಫೆಂಡ್ ಮಾಡದಿರೋದಕ್ಕೆ ಇದೇ ಕಾರಣವಾಗಿತ್ತು.
ಕಟಕ್ ನಲ್ಲಿಯೂ ಬೌಲಿಂಗ್ ವೈಫಲ್ಯವೇ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಐದು ಪಂದ್ಯಗಳ ಟಿ 20 ಸರಣಿಯನ್ನಾಡಲು ಭಾರತಕ್ಕೆ ಆಗಮಿಸಿದೆ. ಅದರಂತೆ ಮೊದಲೆರೆಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದ್ದು, ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಮುಂದಿನ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದ್ರೆ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಭಾರತ ತಂಡ ತವರಿನಲ್ಲಿಯೇ ಸರಣಿ ಸೋಲಿನ ಅವಮಾನ ಎದುರಿಸಲಿದೆ.
ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಭಾರಿ ತಯಾರಿ ನಡೆಸಿವೆ.