IND vs SL : T20I ಸರಣಿಯಿಂದ ಸಂಜೂ ಸ್ಯಾಮ್ಸನ್ ಔಟ್
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜೂ ಸ್ಯಾಮ್ಸನ್ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ T20I ಸರಣಿಯಿಂದ ಹೊರಗುಳಿದಿದ್ದಾರೆ.
ಮುಂಬೈನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸಂಜೂ ಸ್ಯಾಮ್ಸನ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಸಂಜೂ ಸ್ಯಾಮ್ಸನ್ ಗಾಯಗೊಂಡಿರುವ ಬಗ್ಗೆ ಈಗಾಗಲೇ ಬಿಸಿಸಿಐ ಸಹ ಖಚಿತಪಡಿಸಿದೆ.
ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜೂ ಸ್ಯಾಮ್ಸನ್ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇರಳ ಬ್ಯಾಟರ್, ಕೇವಲ 5 ರನ್ಗಳಿಸಿ ಧನಂಜಯ ಡಿಸಿಲ್ವಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಗಾಯದ ಸಮಸ್ಯೆಯಿಂದಾಗಿ ಸಂಜೂ ಸ್ಯಾಮ್ಸನ್ ಟಿ20 ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ಬಿಸಿಸಿಐ ಇವರ ಸ್ಥಾನಕ್ಕೆ ಬದಲಿ ಆಟಗಾರನನ್ನ ಆಯ್ಕೆ ಮಾಡಿದ್ದು, ಅದರಂತೆ ಜಿತೇಶ್ ಶರ್ಮ ಅವರು ಭಾರತ ತಂಡವನ್ನ ಕೂಡಿಕೊಂಡಿದ್ದಾರೆ.
ಮೂರು ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಜನವರಿ 5ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿದೆ.