ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳ ಸರಣಿಗೆ ಸೆಪ್ಟೆಂಬರ್ 23 ಅಥವಾ 24 ರಂದು ಟೀಂ ಇಂಡಿಯಾ ಘೋಷಣೆಯಾಗಲಿದೆ. BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಮಾಹಿತಿ ತಿಳಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್ 2 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ ಮತ್ತು ಎರಡನೇ ಟೆಸ್ಟ್ ಅಕ್ಟೋಬರ್ 10 ರಿಂದ ದೆಹಲಿಯಲ್ಲಿ ನಡೆಯಲಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಇದು ಭಾರತದ ಮೊದಲ ದೇಶೀಯ ಟೆಸ್ಟ್ ಸರಣಿಯಾಗಲಿದೆ. ವೆಸ್ಟ್ ಇಂಡೀಸ್ ತಂಡ ಈಗಾಗಲೇ ತನ್ನ ತಂಡವನ್ನು ಘೋಷಿಸಿದೆ. ಈ ಸರಣಿಯು ಅಭಿಮಾನಿಗಳಿಗೆ ಕ್ರಿಕೆಟ್ ಉತ್ಸಾಹ ತುಂಬಲಿದೆ.
ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್
ಗದಗ: ಕರಾವಳಿ ಭಾಗದಲ್ಲಿ ಸಂಪುಟ ಸಭೆ ನಡೆಸಿ ಜೈಕಾರ ಹಾಕಿಸಿಕೊಳ್ಳುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಉತ್ತರ ಕರ್ನಾಟಕದ ಭಾಗದಿಂದ ಭಾರೀ ಆಘಾತ ಎದುರಾಗಿದೆ. ಗದಗ ತಾಲ್ಲೂಕನ್ನು...








