IND Vs ZIM ODI Series : ಜಿಂಬಾಬ್ವೆ ಏಕದಿನ ಸರಣಿ : ಧವನ್ ಗೆ ನಾಯಕತ್ವ
ವೆಸ್ಟ್ ಇಂಡೀಸ್ ಜೊತೆಗಿನ ಒನ್ ಡೇ ಸಿರೀಸ್ ಮುಗಿದ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.
ಈ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಏಕದಿನ ಸರಣಿಯನ್ನು ಆಡಲಿದೆ.
ಆಗಸ್ಟ್ 18 ರಂದು ಹರಾರೆ ವೇದಿಕೆಯಾಗಿ ಮೊದಲ ಏಕದಿನ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ.
ಆದ್ರೆ ಆಗಸ್ಟ್ 27 ರಿಂದ ಶ್ರೀಲಂಕಾ ವೇದಿಕೆಯಾಗಿ ಏಪ್ಯಾ ಕಪ್ ಆರಂಭವಾಗಲಿದೆ.
ಹೀಗಾಗಿ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ದ್ವಿತೀಯ ಶ್ರೇಣಿಯ ತಂಡವನ್ನು ಕಳುಹಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ.
ಈ ಪ್ರವಾಸಕ್ಕೆ ನಾಯಕ ರೋಹಿತ್ ಶರ್ಮಾ, ಹೆಡ್ ಕೋಚ್ ರಾಹುಲ್ ದ್ರಾವಿಡ್ ದೂರವಾಗಲಿದ್ದಾರೆ.
ಹೀಗಾಗಿ ಜಿಂಬಾಬ್ವೆ ಟೂರಿಗೆ ಹೋಗುವ ಭಾರತ ತಂಡಕ್ಕೆ ನಾಯಕರಾಗಿ ಶಿಖರ್ ಧವನ್, ಹೆಡ್ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಜವಾಬ್ದಾರಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ವೆಸ್ಟ್ ಇಂಡೀಸ್ ಟೂರಿಗೆ ಟೀಂ ಇಂಡಿಯಾ ನಾಯಕರಾಗಿ ಧವನ್ ಆಯ್ಕೆಯಾಗಿರೋದು ಗೊತ್ತೆ ಇದೆ.
ಟಿ 20 ವಿಶ್ವಕಪ್ ಸಮಯ ಹತ್ತಿರದಲ್ಲಿದ್ದು, ನಮ್ಮ ದೃಷ್ಠಿ ಟಿ 20 ಪಂದ್ಯಗಳ ಮೇಲೆ ಇದೆ.
ಯುವ ಕ್ರಿಕೆಟರ್ಸ್, ಸಿನಿಯರ್ ಆಟಗಾರರ ಸಮ್ಮಿಲನದಲ್ಲಿ ತಂಡವನ್ನು ತಯಾರಿಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಜಿಂಬಾಬ್ವೆ ಸರಣಿಗೆ ಟಿ 20 ರೆಗ್ಯೂಲರ್ ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಅಂದುಕೊಂಡಿದ್ದೇವೆ.
ಈ ಸರಣಿಯಲ್ಲಿ ಭಾರತ ಹಿರಿಯ ಆಟಗಾರ ಶಿಖರ್ ಧವನ್ ನಾಯಕತ್ವ ವಹಿಸಲಿದ್ದಾರೆ.
ಅದೇ ರೀತಿ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡಕ್ಕೆ ಲಕ್ಷ್ಮಣ್ ಕೋಚ್ ಆಗಲಿದ್ದಾರೆ.
ದ್ರಾವಿಡ್ ಅವರಿಗೂ ಕೆಲವು ದಿನಗಳಿಂದ ವಿಶ್ರಾಂತಿ ಇಲ್ಲ.
ಆದ್ದರಿಂದ ಏಪ್ಯಾ ಕಪ್ ಗೂ ಮೊದಲು ಆಟಗಾರರ ಜೊತೆಗೆ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡುತ್ತೇವೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.