ಟೋಕಿಯೋ ಒಲಿಂಪಿಕ್ಸ್ – ಭಾರತಕ್ಕೆ ಭರವಸೆ ಮೂಡಿಸಿದ ಎರಡನೇ ದಿನ
ಬಾಕ್ಸಿಂಗ್
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ. ಇಂದು ನಡೆದ 51 ಕೆಜಿ ವಿಭಾಗದ ಪಂದ್ಯದಲ್ಲಿ ಡೊಮಿನಿಕನ್ ರಿಪಬ್ಲಿಕನ್ ನ ಎದುರಾಳಿ ಮಿಗುಲೆನಾ ಹರ್ನಾಂಡೆಜ್ ಗಾರ್ಸಿಯಾ ವಿರುದ್ಧ 4-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಟೇಬಲ್ ಟೆನ್ನಿಸ್
ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರ ಜಯ ಸಾಧಿಸಿದ್ದಾರೆ. ಇವರು ಉಕ್ರೇನ್ ಆಟಗಾರ್ತಿ ಮಾರ್ಗರಿಟಾ ಪೆಸೋಟ್ಸ್ ಕಾ ವಿರುದ್ಧದ ಜಿದ್ದಾಜಿದ್ದಿನ ಕಾಳಗದಲ್ಲಿ 4-3 ಅಂತರದಿಂದ ಜಯ ಸಾಧಿಸಿದ್ದಾರೆ

ಬ್ಯಾಡ್ಮಿಂಟನ್
2016 ರ ರಿಯೋ ಒಲಿಂಪಿಕ್ಸನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಭರವಸೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಅವರು ಇಂದು ಬೆಳಿಗ್ಗೆ ಇಸ್ರೇಲನ್ ಆಟಗಾರ್ತಿ ಸೆನಿಯಾ ಪೊಲಿಕರ್ಪೂವಾ ವಿರುದ್ದ ಗೆಲುವು ಸಾಧಿಸಿ ಎರಡನೆಯ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಪುರುಷರ ರೋಯಿಂಗ್
ಭಾರತದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ ಸಿಂಗ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡವು ಟೋಕಿಯೊ ಒಲಂಪಿಕ್ಸ್ ನ ಪುರುಷರ ಲೈಟ್ ವೇಟ್ ಡಬಲ್ಸ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ
#Tokyo #Olympics #MaryKom








