ದೇಶ ವಾಸಿಯೋ ಎಚ್ಚರ : ಮಿತಿ ಮೀರಿದೆ ಕೊರೊನಾ ಅಟ್ಟಹಾಸ, ನಿನ್ನೆ 1 ಲಕ್ಷ ಕೇಸ್ ಪತ್ತೆ
ನವದೆಹಲಿ : ದೇಶ್ ವಾಸಿಯೋ ಎಚ್ಚರ ಎಚ್ಚರ..! ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿ ಮೀರುತ್ತಿದೆ.
ಸಿಕ್ಕ ಸಿಕ್ಕ ದೇಹ ಹೊಕ್ಕುತ್ತಿರುವ ಹೆಮ್ಮಾರಿ ವೈರಸ್ ಅಟ್ಟಹಾಸ ಮೆರೆಯುತ್ತಾ ಸಾಗುತ್ತಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1 ಲಕ್ಷದ 03 ಸಾವಿರದ 558 ಹೊಸ ಕೊರೊನಾ ಪ್ರಕರಣ ವರದಿಯಾಗಿದೆ.
ಒಂದೇ ದಿನ 478 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿಯ 25 ಲಕ್ಷದ 89 ಸಾವಿರದ 067ಕ್ಕೆ ಸೋಂಕಿಗೆ ಬಲಿಯಾದವರ ಸಂಖ್ಯೆ 1 ಲಕ್ಷದ 65 ಸಾವಿರದ 101ಕ್ಕೆ ಏರಿಕೆಯಾಗಿದೆ.
1 ಕೋಟಿಯ 25 ಲಕ್ಷದ 89 ಸಾವಿರದ 067 ಸೋಂಕಿತರ ಪೈಕಿ 1,16,82,136 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಸದ್ಯ ದೇಶದಲ್ಲಿ 7 ಲಕ್ಷದ 41 ಸಾವಿರದ 830 ಸಕ್ರಿಯ ಪ್ರಕರಣಗಳಿವೆ.
