ನವದೆಹಲಿ: ತೈಲ ಖರೀದಿ ಸಂದರ್ಭದಲ್ಲಿ ಯಾವ ದೇಶವೂ ಡಾಲರ್ ಬಿಟ್ಟು ರೂಪಾಯಿ ಸ್ವೀಕರಿಸುತ್ತಿರಲಿಲ್ಲ. ಆದರೆ, ಸದ್ಯ ಯುಎಇ ರೂಪಾಯಿಯಲ್ಲಿ ಹಣ ಸ್ವೀಕರಿಸಿದೆ ಎಂಬ ವರದಿಯಾಗಿದೆ.
ಸಂಯುಕ್ತ ಅರಬ್ ಸಂಸ್ಥಾನದಿಂದ (UAE) ಖರೀದಿಸಲಾದ ತೈಲಕ್ಕೆ ಭಾರತ ರೂಪಾಯಿಯಲ್ಲಿ ಕರೆನ್ಸಿ ಪಾವತಿಸಿದೆ. ಯುಎಇ ತೈಲ ಮಾರಾಟದಲ್ಲಿ ಭಾರತದ ಕರೆನ್ಸಿಯಲ್ಲಿ ಹಣ ಪಾವತಿ ಪಡೆದದ್ದು ಇದೇ ಮೊದಲು ಎನ್ನಲಾಗಿದೆ. ರೂಪಾಯಿ ಕರೆನ್ಸಿ (Rupee currency) ಬಳಕೆ ಹೆಚ್ಚೆಚ್ಚು ಮಾಡುವ ಇರಾದೆ ಹೊಂದಿರುವ ಭಾರತಕ್ಕೆ ಇದು ಆರಂಭಿಕ ಹೆಜ್ಜೆಗಳು ಎನ್ನಲಾಗಿದೆ.