ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy)ಯ ಎರಡನೇ ಪಂದ್ಯದಲ್ಲಿ ಭಾರತ ಸೋಲಿನ ಹಾದಿ ಹಿಡಿದಿದೆ.
ಹೆಡ್ ಶತಕದ ನೆರವಿನಿಂದ ಆಸೀಸ್ (Australia) ಮೊದಲ ಇನ್ನಿಂಗ್ಸ್ನಲ್ಲಿ 337 ರನ್ ಗಳಿಸಿದೆ. ಆದರೆ, ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಪ್ರಮುಖ ಐದು ವಿಕೆಟ್ ಗಳನ್ನು ಕಳೆದುಕೊಂಡು 128 ರನ್ ಗಳಿಸಿದೆ. ಈ ಮೂಲಕ 29 ರನ್ ಗಳ ಹಿನ್ನಡೆ ಅನುಭವಿಸಿದೆ. ರಿಷಬ್ ಪಂತ್ ಹಾಗೂ ನಿತೀಶ್ ಕುಮಾರ್ ಕ್ರೀಸ್ ನಲ್ಲಿದ್ದು, ಇವರಿಬ್ಬರ ಆಟದ ಮೇಲೆ ಭಾರತದ ಗೆಲುವಿನ ಲೆಕ್ಕಾಚಾರ ಅಡಗಿದೆ.
ಯಶಸ್ವಿ ಜೈಸ್ವಾಲ್ 24 ರನ್, ಶುಭಮನ್ ಗಿಲ್ 28 ರನ್, ರೋಹಿತ್ ಶರ್ಮಾ (Rohit Sharma) 6 ರನ್, ವಿರಾಟ್ ಕೊಹ್ಲಿ 11 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಮೊದಲ ದಿನದ ಅಂತ್ಯಕ್ಕೆ 33 ಓವರ್ಗಳಲ್ಲಿ 86 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಆಸೀಸ್ ಇಂದು 2ನೇ ದಿನದ ಇನ್ನಿಂಗ್ಸ್ ಆರಂಭಿಸಿತು. 103 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಮಧ್ಯಮ ಕ್ರಮಾಂಕದ ಆಟಗಾರರು ಚೇತರಿಕೆ ನೀಡಿದರು. ಟ್ರಾವಿಸ್ ಹೆಡ್ 141 ಎಸೆತಗಳಲ್ಲಿ 140 ರನ್ (17 ಬೌಂಡರಿ, 4 ಸಿಕ್ಸರ್) ಸಿಡಿಸಿದರು. ಇದರೊಂದಿಗೆ ಮಾರ್ನಸ್ ಲಾಬುಶೇನ್ 64 ರನ್ (126 ಎಸೆತ, 9 ಬೌಂಡರಿ), ನಾಥನ್ ಮ್ಯಾಕ್ಸ್ವೀನಿ 39 ರನ್, ಉಸ್ಮಾನ್ ಖವಾಜ 13 ರನ್, ಅಲೆಕ್ಸ್ ಕ್ಯಾರಿ 15 ರನ್, ಪ್ಯಾಟ್ ಕಮ್ಮಿನ್ಸ್ 12 ರನ್, ಮಿಚೆಲ್ ಸ್ಟಾರ್ಕ್ 18 ರನ್, ನಥಾನ್ ಲಿಯಾನ್ 4 ರನ್ ಗಳಿಸಿದರು. ಬಾರತದ ಪರ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 4 ವಿಕೆಟ್ ಕಿತ್ತರೆ, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.








