ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆಗೆ ಭಾರತ ಉತ್ತಮ ಮೊತ್ತ ಕಲೆ ಹಾಕಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 322 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ ಶತಕ ಸಿಡಿಸಿದರೆ, ಶುಭ್ಮನ್ ಗಿಲ್ ಅಜೇಯ ಅರ್ಧಶತಕ ಗಳಿಸಿ ಆಡುತ್ತಿದ್ದಾರೆ. ಹೀಗಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮುನ್ನಡೆ ಸಾಧಿಸಿದೆ. ಅಂತಿಮವಾಗಿ ನಾಲ್ಕನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 196 ಕಲೆಹಾಕಿದೆ.
ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ವೈಯಕ್ತಿ ಮೂರನೇ ಶತಕ ಸಿಡಿಸಿದ್ದಾರೆ. ಶತಕವಾಗುತ್ತಿದ್ದಂತೆ ರಿಟೈರ್ಡ್ ಹರ್ಟ್ ಆಗಿದ್ದಾರೆ. ನಂತರ ಬಂದ ಪಾಟಿದಾರ್ ಮತ್ತೊಮ್ಮೆ ವಿಫಲವಾಗಿದ್ದಾರೆ. ಸದ್ಯ ಕುಲ್ದೀಪ್ ಯಾದವ್ ಹಾಗೂ ಶುಭಮನ್ ಗಿಲ್ ಕಣದಲ್ಲಿದ್ದಾರೆ.