ನವದೆಹಲಿ : ಇಂಟರ್ ನೆಟ್ ವೇಗದಲ್ಲಿ ಭಾರತ ನೆರೆಯ ಪಾಕಿಸ್ತಾನ, ನೇಪಾಳ, ಶ್ರೀಲಂಕಾ ದೇಶಗಳ ಹಿಂದೆ ಇದೆ. ಓಕ್ಲಾ ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ವರದಿ ಪ್ರಕಾರ, ಮೊಬೈಲ್ ಇಂಟರ್ ನೆಟ್ ವೇಗದಲ್ಲಿ ಭಾರತಕ್ಕೆ 131ನೇ ಸ್ಥಾನ ( India ranks 131st )ಲಭಿಸಿದೆ.
ಜಾಗತಿಕವಾಗಿ ಡೌನ್ ಲೋಡ್ ವೇಗ ( ಸೆಕೆಂಡಿಗೆ ) 35.26 ಎಂಬಿಪಿಎಸ್ ರಷ್ಟಿದೆ. ಆದ್ರೆ ಭಾರತದಲ್ಲಿ ಇದು 12.07 ಎಂಬಿಪಿಎಸ್ ನಷ್ಟಿದೆ.
ಇನ್ನು ಜಾಗತಿಕವಾಗಿ ಅಪ್ ಲೋಡ್ ವೇಗ 11.22 ಎಂಬಿಪಿಎಸ್ ರಷ್ಟಿದ್ದರೇ ಭಾರತದಲ್ಲಿ 4.31 ಎಂಬಿಪಿಎಸ್ ಇದೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದುರ್ಗಾ ನಾಗ್ ದೇವಸ್ಥಾನಕ್ಕೆ ಭೇಟಿ
ಓಕ್ಲಾ ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ವರದಿಯಲ್ಲಿ ದಕ್ಷಿಣ ಕೊರಿಯಾ 121 ಎಂಬಿಪಿಎಸ್ ನೊಂದಿಗೆ ಮೊದಲ ಸ್ಥಾನದಲ್ಲಿದೆ.
ನೇಪಾಳ, ಶ್ರೀಲಂಕಾ ಬೆಸ್ಟ್
ಮೊಬೈಲ್ ಇಂಟರ್ ನೆಟ್ ವೇಗ ಭಾರತಕ್ಕಿಂತ ನೆರೆ ದೇಶಗಳಾದ ಶ್ರೀಲಂಕಾ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ಹೆಚ್ಚಾಗಿದೆ.
19.95 ಎಂಬಿಪಿಎಸ್ ವೇಗದೊಂದಿಗೆ ಶ್ರೀಲಂಕಾ 102ನೇ ಸ್ಥಾನದಲ್ಲಿದೆ. ಪಾಕಿಸ್ತಾನ 17.13 ಎಂಬಿಪಿಎಸ್ ನೊಂದಿಗೆ 116ನೇ ಸ್ಥಾನದಲ್ಲಿ,
17.12 ಎಂಬಿಪಿಎಸ್ ವೇಗದೊಂದಿಗೆ ನೇಪಾಳ 117ನೇ ಸ್ಥಾನದಲ್ಲಿದೆ.
ಎಫ್‌ಎಟಿಎಫ್ ಗ್ರೇ ಪಟ್ಟಿಯಲ್ಲೇ ಉಳಿಯಲಿರುವ ಪಾಕಿಸ್ತಾನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel