ಚೀನಾದಿಂದ ಭಾರತಕ್ಕೆ ಅಮದು ಮಾಡಲಾದ ಕೊರೋನಾ ಸೋಂಕು ಪತ್ತೆ ಹಚ್ಚಲು ಬಳಸಲಾಗುವ ರ‍್ಯಾಪಿಡ್ ಟೆಸ್ಟ್ ಕಿಟ್ ಮತ್ತು ಆರ್ ಟಿ-ಪಿಸಿಆರ್ ಕಿಟ್ ಗಳಲ್ಲಿ ದೋಷ ಕಂಡು ಬಂದ ಕಾರಣದಿಂದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲಾ ರಾಜ್ಯಗಳಿಗೆ ಚೀನಾದಿಂದ ಅಮದು ಮಾಡಲಾದ ಕಿಟ್ ಗಳನ್ನು ಬಳಸಬೇಡಿ ಎಂದು ತಿಳಿಸಿದೆ. ಚೀನಾದಿಂದ ಆಮದು ಮಾಡಲಾದ ಕಿಟ್ ಗಳಲ್ಲಿ ನಿಖರತೆಯ ತೊಂದರೆ ಇರುವ ಹಿನ್ನೆಲೆಯಲ್ಲಿ, ಅವುಗಳನ್ನು ಬಳಸದೆ ವಾಪಾಸ್ ಕಳುಹಿಸಿ ಎಂದು ಐಸಿಎಂಆರ್ ಸೂಚಿಸಿದ್ದು, ಇದರಿಂದ ಚೀನಾ ಸಿಡಿಮಿಡಿಗೊಂಡಿದೆ. ಚೀನಾ ಉತ್ಪನ್ನಗಳನ್ನು ಅನುಮಾನದಿಂದ ನೋಡುವುದು, ದೋಷದಿಂದ ಕೂಡಿದೆ ಎಂದು ಹೇಳುವುದು ಬೇಜವಾಬ್ದಾರಿಯ ವರ್ತನೆ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರೋಂಗ್ ಹೇಳಿದ್ದು, ಟೆಸ್ಟ್ ಕಿಟ್ ಗಳನ್ನು ಉಪಯೋಗಿಸುವಾಗ ಅಥವಾ ಸಾಗಾಟ ಮಾಡುವಾಗ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸದೆ ಈ ರೀತಿಯ ತೊಂದರೆ ಆಗಿರಬಹುದು ಎಂದು ಆರೋಪದಿಂದ ನುಣುಚಿಕೊಳ್ಳಲು ನೋಡಿದೆ. ಭಾರತವು ಟೆಸ್ಟ್ ಕಿಟ್ ಗಳ ವಿಚಾರವಾಗಿ ಚೀನಾದೊಂದಿಗೆ ಮಾತುಕತೆ ನಡೆಸಿ ವಾಸ್ತವತೆಯನ್ನು ಗಂಭೀರವಾಗಿ ಅರಿತು ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಚೀನಾದ ರಾಯಭಾರ ಕಚೇರಿ ವಕ್ತಾರೆ ಜಿ ರೋಂಗ್ ಹೇಳಿದ್ದಾರೆ.
ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು
ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕನ್ (Mexico) ನ ಚಿಯಾಪಾಸ್ನಲ್ಲಿ ಸರಕು ಸಾಗಣೆ ವೇಳೆ ಟ್ರಕ್ ವೊಂದು ಅಪಘಾತವಾಗಿದ್ದು, 10 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ,...