ಕಳೆದ 24 ಗಂಟೆ 3,805 ಹೊಸ ಕರೋನ ಸೋಂಕು ಪತ್ತೆ…
ಭಾರತ ಕಳೆದ ಒಂದು ದಿನದಲ್ಲಿ 3,805 ಹೊಸ ಕರೋನವೈರಸ್ ಸೋಂಕುಗಳನ್ನ ಪತ್ತೆಹಚ್ಚಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 20,303 ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 4,30,98,743 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಿಸಿದ ಅಂಕಿಅಂಶಗಳು ಪ್ರಕಾರ ತಿಳಿದುಬಂದಿದೆ.
ಬೆಳಿಗ್ಗೆ 8 ಗಂಟೆಗೆ ಬಿಡುಗಡೆಯಾದ ವರದಿಯ ಪ್ರಕಾರ ನಿನ್ನೆ 22 ಸಾವುನೋವುಗಳನ್ನು ಕೋವಿಡ್ ನಿಂದ ಕಂಡು ಬಂದಿವೆ. ಅವುಗಳಲ್ಲಿ 20 ಸಾವು ಕೇರಳದಿಂದ ವರದಿಯಾಗಿದೆ. ಇಲ್ಲಿಯವರೆಗಿನ ಒಟ್ಟು ಕೋವಿಡ್ ಸಾವಿನ ಸಂಖ್ಯೆ 5,24,024 ಕ್ಕೆ ಮುಟ್ಟಿದೆ.
ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇಕಡಾ 0.05 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ, ದೇಶದ COVID-19 ಚೇತರಿಕೆಯ ಪ್ರಮಾಣವು 98.74 ಶೇಕಡಾದಲ್ಲಿದೆ. ದೈನಂದಿನ ಪಾಸಿಟಿವಿಟಿ ದರ 0.78 ಶೇಕಡಾ ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರವು 0.79 % ದಾಖಲಾಗಿದೆ. ರಾಷ್ಟ್ರವ್ಯಾಪ್ತಿ ಕೋವಿಡ್ ವ್ಯಾಕ್ಸಿನೇಷನ್ ಅಡಿಯಲ್ಲಿ ಇದುವರೆಗೆ 190 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.