india ಕೊರೊನಾ ರಿಪೋರ್ಟ್ : ಸೋಂಕಿತರ ಕಡಿಮೆಯಾದ್ರೂ ಹೆಚ್ಚಿದ ಸಾವಿನ ಸಂಖ್ಯೆ
ನವದೆಹಲಿ : ದೇಶದಲ್ಲಿ ದಿನ ಒಂದರಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಸದ್ಯ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಆದ್ರೆ ಸಾವಿನ ಸಂಖ್ಯೆ ಮಾತ್ರ ಏರಿಕೆಯಾಗುತ್ತಲೇ ಇದ್ದು, ಆತಂಕಕ್ಕೆ ಕಾರಣವಾಗಿದೆ.
ಕಳೆದ 70 ದಿನಗಳ ಬಳಿಕ ದೇಶದಲ್ಲಿ ಅತೀ ಕಡಿಮೆ ಅಂದರೆ 84,332 ಕೊರೊನಾ ಕೇಸ್ ಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ 4,002 ಮಂದಿ ವೈರಸ್ ಗೆ ಬಲಿಯಾಗಿದ್ದಾರೆ.
ಈ ಮೂಲಕ ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆ 2,93,59,155 ಹಾಗೂ ಮೃತರ ಸಂಖ್ಯೆ 3,67,081ಕ್ಕೆ ಏರಿಕೆಯಾಗಿದೆ.
ಇನ್ನು ನಿನ್ನೆ ಒಂದೇ ದಿನದಲ್ಲಿ 1,21,311 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 2,79,11,384 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿನ್ನೂ 10,80,690 ಸಕ್ರಿಯ ಪ್ರಕರಣಗಳಿವೆ.