ಕಾನ್ಪುರ: ಬಾಂಗ್ಲಾದೇಶ ವಿರುದ್ಧ ನಡೆದ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಭಾರತ ತಂಡವು (Team India) 2016ರ ನಂತರದಿಂದ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿದೆ.
2016ರಿಂದ ಇಲ್ಲಿಯವರೆಗೆ ತಾನು ಆಡಿದ 86 ಪಂದ್ಯಗಳಲ್ಲಿ 53 ಪಂದ್ಯಗಳನ್ನು ಗೆದ್ದು 21 ಪಂದ್ಯಗಳಲ್ಲಿ ಸೋತಿದೆ. 12 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಅತೀ ಹೆಚ್ಚು ಪಂದ್ಯ ಗೆದ್ದ ಸಾಧನೆ ಗಮನಿಸುವುದಾದರೆ,
ಭಾರತ: 86 ಪಂದ್ಯ – 53 ಗೆಲುವು – 21 ಸೋಲು – 12 ಡ್ರಾ
ಇಂಗ್ಲೆಂಡ್: 111 ಪಂದ್ಯ – 52 ಗೆಲುವು – 44 ಸೋಲು – 15 ಡ್ರಾ
ಆಸ್ಟ್ರೇಲಿಯಾ: 81 ಪಂದ್ಯ – 44 ಗೆಲುವು – 24 ಸೋಲು – 13 ಡ್ರಾ
ದಕ್ಷಿಣ ಆಫ್ರಿಕಾ: 69 ಪಂದ್ಯ – 35 ಗೆಲುವು – 28 ಸೋಲು – 6 ಡ್ರಾ
ನ್ಯೂಜಿಲಾಂಡ್: 66 ಪಂದ್ಯ – 32 ಗೆಲುವು – 24 ಸೋಲು – 10 ಡ್ರಾ
ಶ್ರೀ ಲಂಕಾ: 76 ಪಂದ್ಯ 31- ಗೆಲುವು – 33 ಸೋಲು – 12 ಡ್ರಾ
ಪಾಕಿಸ್ತಾನ: 63 ಪಂದ್ಯ – 22 ಗೆಲುವು – 33 ಸೋಲು – 8 ಡ್ರಾ
ವೆಸ್ಟ್ ಇಂಡೀಸ್: 68 ಪಂದ್ಯ – 19 ಗೆಲುವು – 37 ಸೋಲು – 12 ಡ್ರಾ
ಬಾಂಗ್ಲಾ ದೇಶ: 53 ಪಂದ್ಯ – 14 ಗೆಲುವು – 36 ಸೋಲು – 3 ಡ್ರಾ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 35 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು.
ಆನಂತರ ಪಂದ್ಯ ಮಳೆಗೆ ಆಹುತಿಯಾಗಿತ್ತು. 2, 3ನೇ ದಿನ ಮಳೆಗೆ ಪಂದ್ಯ ಕೂಡ ಮಳೆಗೆ ಬಲಿಯಾಗಿತ್ತು. 4ನೇ ದಿನ ಆಟ ಆರಂಭಿಸಿದ ಬಾಂಗ್ಲಾ 233 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಟಿ20 ಶೈಲಿಯಲ್ಲಿ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಭಾರತ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬೌಲಿಂಗ್ ಹಿಡಿತ ಸಾಧಿಸಿದ ಭಾರತ, ಬಾಂಗ್ಲಾ ತಂಡವನ್ನು 146 ರನ್ ಗಳಿಗೆ ಕಟ್ಟಿ ಹಾಕಿತು. ಕೊನೆಗೆ ಭಾರತ ತಂಡವು 3 ವಿಕೆಟ್ ಗಳಿಗೆ 98 ರನ್ ಗಳಿಸಿ ಗೆಲುವು ಸಾಧಿಸಿತು.