ಟೀಮ್ ಇಂಡಿಯಾದ ಅಬ್ಬರಕ್ಕೆ ದಿಕ್ಕು ತಪ್ಪಿದ ಲಂಕಾ…!ನಾಯಕನ ಆಟವನ್ನಾಡಿದ ಶಿಖರ್ ಧವನ್..!

1 min read
SHIKHAR DHAWAN SAAKSHATV TEAM INDIA

ಟೀಮ್ ಇಂಡಿಯಾದ ಅಬ್ಬರಕ್ಕೆ ದಿಕ್ಕು ತಪ್ಪಿದ ಲಂಕಾ…!ನಾಯಕನ ಆಟವನ್ನಾಡಿದ ಶಿಖರ್ ಧವನ್..!

TEAM INDIA SAAKSHATV SRILANKA ನಾಯಕ ಶಿಖರ್ ಧವನ್ ಅವರ ಅಮೋಘ ಆಟದ ನೆರವನ್ನು ಪಡೆದ ಟೀಮ್ ಇಂಡಿಯಾ ಏಳು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು. ಯಂಗ್ ಇಂಡಿಯಾದ ಬಿರುಸಿನ ಆಟಕ್ಕೆ ಲಂಕಾ ಬೌಲರ್ ಗಳು ದಿಕ್ಕು ತಪ್ಪಿದ್ರು. ಪರಿಣಾಮ ಟೀಮ್ ಇಂಡಿಯಾ ಕೇವಲ 36.4 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಲಂಕಾ ತಂಡದ ಸವಾಲಿಗೆ ದಿಟ್ಟ ಉತ್ತರವನ್ನು ನೀಡಿದ ಟೀಮ್ ಇಂಡಿಯಾ ಅಬ್ಬರದ ಆರಂಭವನ್ನೇ ಪಡೆಯಿತು. ಯುವ ಬ್ಯಾಟ್ಸ್ ಮೆನ್ ಪೃಥ್ವಿ ಶಾ ಅದ್ಭುತ ಲಯವನ್ನು ಮುಂದುವರಿಸಿದ್ರು. ಕೇವಲ 5.3 ಓವರ್ ಗಳಲ್ಲಿ ಪೃಥ್ವಿ ಶಾ ಮತ್ತು ಶಿಖರ್ ಧವನ್ 60 ರನ್ ಕಲೆ ಹಾಕಿದ್ರು. ಈ ಹಂತದಲ್ಲಿ 24 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಪೃಥ್ವಿ ಶಾ 43 ರನ್ ಸಿಡಿಸಿದ್ರು.
ನಂತರ ಶಿಖರ್ ಧವನ್ ಜೊತೆ ಸೇರಿದ ಇಶಾನ್ ಕಿಶಾನ್ ಅವರು ಎರಡನೇ ವಿಕೆಟ್ ಗೆ 84 ರನ್ ಪೇರಿಸಿದ್ರು. ಇಶಾನ್ ಕಿಶಾನ್ ಅವರು 42 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ 59 ರನ್ ದಾಖಲಿಸಿದ್ರು.
ಇನ್ನೊಂದೆಡೆ ನಾಯಕನ ಜವಾಬ್ದಾರಿ ಅರಿತುಕೊಂಡು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ಅವರು ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಈ ನಡುವೆ ಧವನ್ ಮತ್ತು ಮನೀಶ್ ಪಾಂಡೆ ಅವರು ಮೂರನೇ ವಿಕೆಟ್ ಗೆ 72 ರನ್ ಕಲೆ ಹಾಕಿದ್ರು. ಮನೀಷ್ ಪಾಂಡೆ ಅವರು 26 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
TEAM INDIA SAAKSHATV SRILANKA ಬಳಿಕ ಶಿಖರ್ ಧವನ್ ಮತ್ತು ಸೂರ್ಯಕುಮಾರ್ ಯಾದವ್ ನಾಲ್ಕನೇ ವಿಕೆಟ್ ಗೆ ಅಜೇಯ 47 ರನ್ ದಾಖಲಿಸಿದ್ರು. ಶಿಖರ್ ಧವನ್ 95 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಅಜೇಯ 85 ರನ್ ಗಳಿಸಿದ್ರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ ಅಜೇಯ 31 ರನ್ ದಾಖಲಿಸಿದ್ರು. ಇದರೊಂದಿಗೆ ಟೀಮ್ ಇಂಡಿಯಾ 36.5 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 263 ರನ್ ಗಳಿಸಿತ್ತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.

ಶ್ರೀಲಂಕಾ 9 ವಿಕೆಟ್ ಗೆ 262 ರನ್

ಇದಕ್ಕು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತ್ತು.
ಆರಂಭಿಕರಾದ ಅವಿಶ್ಕಾ ಫೆರ್ನಾಂಡೊ 32 ರನ್ ಗಳಿಸಿದ್ರೆ, ಮಿನೋದ್ ಭಾನುಕಾ 27 ರನ್ ದಾಖಲಿಸಿದ್ರು. ಹಾಗೇ ಭಾನುಕಾ ರಾಜಪಕ್ಷ 24 ರನ್, ಧನಂಜಯ ಡಿ ಸಿಲ್ವಾ 14 ರನ್ ಹಾಗೂ ಚರಿತ್ ಅಸಲಾಂಕ 38 ರನ್, ನಾಯಕ ದಸುನ್ ಶನಾಕ 39 ರನ್, ವಾನಿಂದು ಹಸರಂಗ 8 ರನ್ ಗಳಿಸಿದ್ರು.
ಕೆಳ ಕ್ರಮಾಂಕದಲ್ಲಿ ಚಾಮಿಕಾ ಕರುಣರತ್ನೆ ಅವರು 35 ಎಸೆತಗಳಲ್ಲಿ 43 ರನ್ ದಾಖಲಿಸಿ ತಂಡದ ಮೊತ್ತವನ್ನು 250 ಗಡಿ ದಾಟಿಸಿದ್ರು. ಟೀಮ್ ಇಂಡಿಯಾ ಪರ ವೇಗಿ ದೀಪಕ್ ಚಾಹರ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಉರುಳಿಸಿದ್ರು. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಕಬಳಿಸಿದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd