India Vs Australia : ಮೂರನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿಜಯ – ಭಾರತಕ್ಕೆ ಹೀನಾಯ ಸೋಲು…
ಇಂದೋರ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಜಯ ಸಾಧಿಸಿದೆ. ಭಾರತ ನೀಡಿದ 76 ರನ್ ಗಳ ಗುರಿ ಪಡೆದ ಆಸ್ಟ್ರೇಲಿಯಾ 18.5 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಮೂಲಕ ಒಂಬತ್ತು ವಿಕೆಟ್ ಗಳ ಅಂತರದಲ್ಲಿ ಬೃಹತ್ ಜಯ ದಾಖಲಿಸಿತು.
ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 109 ರನ್ಗಳಿಗೆ ಆಲೌಟಾಯಿತು. ವಿರಾಟ್ ಕೊಹ್ಲಿ 22 ರನ್ ಮತ್ತು ಶುಭಮನ್ ಗಿಲ್ 21 ರನ್ ಗಳಿಸಿದ್ದೇ ಹೆಚ್ಚಿನ ಮೊತ್ತವಾಯಿತು. ಮೊದಲ ಇನಿಂಗ್ಸ್ನಲ್ಲಿ ಆಸೀಸ್ ಬೌಲರ್ ಕುನೆಮನ್ 5 ವಿಕೆಟ್ ಪಡೆದು ಮಿಂಚಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 197 ರನ್ಗಳಿಗೆ ಆಲೌಟ್ ಆಯಿತು. ಖವಾಜಾ 60 ರನ್ ಗಳಿಸಿ, ಆಸೀಸ್ ಬ್ಯಾಟ್ಸ್ಮನ್ಗಳ ಪೈಕಿ ಗರಿಷ್ಠ ಮೊತ್ತ ದಾಖಲಿಸಿದ್ದರು. ಲಬುಶೆನ್ನೆ 31 ರನ್ ಮತ್ತು ಸ್ಟೀವನ್ ಸ್ಮಿತ್ 26 ರನ್ ಗಳಿಸಿದರು. ಭಾರತದ ಬೌಲರ್ಗಳ ಪೈಕಿ ರವೀಂದ್ರ ಜಡೇಜಾ 4, ಅಶ್ವಿನ್ ಮತ್ತು ಉಮೇಶ್ ತಲಾ ಮೂರು ವಿಕೆಟ್ ಪಡೆದರು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 88 ರನ್ಗಳ ಮುನ್ನಡೆ ಸಾಧಿಸಿತ್ತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ನಾಥನ್ ಲಯನ್ ಪೆಟ್ಟು ನೀಡಿದರು. ಎಂಟು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 163 ರನ್ ಗಳಿಸಿ ಆಲೌಟ್ ಆಗಿತ್ತು. ಪೂಜಾರ ಅತ್ಯಧಿಕ 59 ರನ್ ಶ್ರೇಯಸ್ ಅಯ್ಯರ್ 26 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದ್ದರು. ಉಳಿದ ಆಟಗಾರರು ಎರಡಂಕಿ ದಾಟಿದಾಟಲೂ ತಿಣುಕಾಡಿದರು. ಇದರೊಂದಿಗೆ ಭಾರತ ಆಸ್ಟ್ರೇಲಿಯಕ್ಕೆ 76 ರನ್ಗಳ ಗುರಿ ನೀಡತು. ಕಡಿಮೆ ರನ್ ಗುರಿಯೊಂದಿಗೆ ಕಣ್ಣಕ್ಕಿಳಿದ ಆಸೀಸ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ ಖವಾಜಾ ಡಕ್ ಔಟ್ ಆದರು.
ಆದರೆ, ನಂತರ ಬಂದ ಟ್ರಾವಿಸ್ ಹೆಡ್ 49 ರನ್ ಮತ್ತು ಲಬುಶಾನೆ 28 ರನ್ ಗಳಿಸಿ ಗುರಿ ಮುಟ್ಟಿಸಿದರು. ಒಂದು ವಿಕೆಟ್ ಕಳೆದುಕೊಂಡ ಆಸೀಸ್ ಸುಲಭವಾಗಿ ಗುರಿ ಮುಟ್ಟಿತು. ಕಳೆದ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಆಸೀಸ್ ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ನಾಲ್ಕು ಟೆಸ್ಟ್ಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.
India Vs Australia: Australia win in the third test – India’s crushing defeat…