ಟೀಕೆ ಮಾಡಿದವರಿಗೆ ಶತಕದ ಮೂಲಕ ರಾಹುಲ್ ಉತ್ತರ..ಬೊಂಬಾಟ್ ಆಟವಾಡಿದ ಪಂತ್..!
India vs England, 2nd ODI Rahul falls after century
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ಆಕರ್ಷಕ ಶತಕ ದಾಖಲಿಸಿದ್ದಾರೆ. ಈ ಮೂಲಕ ಟೀಕೆ ಮಾಡಿದವರಿಗೆ ತನ್ನ ಬ್ಯಾಟ್ ನಿಂದಲೇ ತಕ್ಕ ಉತ್ತರ ನೀಡಿದ್ದಾರೆ.
ಇನ್ನೊಂದೆಡೆ ರಿಷಬ್ ಪಂತ್ ಅವರ ಬೊಂಬಾಟ್ ಆಟದ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಬೆವರಿಳಿಸಿದ್ರು. ಸಮಯೋಚಿತ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ರು. ಪರಿಣಾಮ ಟೀಮ್ ಇಂಡಿಯಾ ಆರು ವಿಕೆಟ್ ಕಳೆದುಕೊಂಡು 336 ರನ್ ದಾಖಲಿಸಿದೆ.
ಪುಣೆಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ಹಂಗಾಮಿ ನಾಯಕ ಜೋಸ್ ಬಟ್ಲರ್ ಅವರ ಗೇಮ್ ಪ್ಲಾನ್ ಅಂದುಕೊಂಡಂತೆ ನಡೆಯಿತ್ತು.
ಸ್ಫೋಟಕ ಬ್ಯಾಟ್ಸ್ ಮೆನ್ ಶಿಖರ್ ಧವನ್ ಕೇವಲ ನಾಲ್ಕು ರನ್ ಗೆ ಸೀಮಿತವಾದ್ರೆ, ರೋಹಿತ್ ಶರ್ಮಾ ಹೋರಾಟ 25 ರನ್ ಗೆ ಕೊನೆಗೊಂಡಿತ್ತು.
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡ ಕೆ.ಎಲ್. ರಾಹುಲ್ ತಂಡದ ರನ್ ಗತಿಯನ್ನು ಏರಿಸಿದ್ರು. ಅಲ್ಲದೆ ಇವರಿಬ್ಬರು ಮೂರನೇ ವಿಕೆಟ್ ಗೆ 121 ರನ್ ಕೂಡ ಕಲೆ ಹಾಕಿದ್ರು. ಆದ್ರೆ ವಿರಾಟ್ ಕೊಹ್ಲಿ 66 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ನಂತರ ರಾಹುಲ್ ಮತ್ತು ರಿಷಬ್ ಪಂತ್ ಇಂಗ್ಲೆಂಡ್ ಬೌಲರ್ ಗಳನ್ನು ಮನಬಂದಂತೆ ಕಾಡಿದ್ರು. ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಇವರಿಬ್ಬರು ನಾಲ್ಕನೇ ವಿಕೆಟ್ ಗೆ 113 ರನ್ ಪೇರಿಸಿದ್ರು.
ಈ ನಡುವೆ ಕೆ.ಎಲ್ ರಾಹುಲ್ ಶತಕದ ಸಂಭ್ರಮದಲ್ಲಿ ತೇಲಾಡಿದ್ರೆ, ರಿಷಬ್ ಪಂತ್ ಅಬ್ಬರದ ಅರ್ಧಶತಕದ ಖುಷಿಯಲ್ಲಿ ತೇಲಾಡಿದ್ರು.
ಕೆ.ಎಲ್. ರಾಹುಲ್ 114 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಆಕರ್ಷಕ 108 ರನ್ ದಾಖಲಿಸಿದ್ರು.
ಮತ್ತೊಂದೆಡೆ ರಿಷಬ್ ಪಂತ್ 40 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ 77 ರನ್ ಸಿಡಿಸಿದ್ರು.
ಅಂತಿಮವಾಗಿ ಪಾಂಡ್ಯ ಬದ್ರರ್ಸ್ ಆರನೇ ವಿಕೆಟ್ 26 ರನ್ ಗಳಿಸಿದ್ರು. ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಮೂಲಕ 35 ರನ್ ಗಳಿಸಿದ್ರು. ಕೃನಾಲ್ ಪಾಂಡ್ಯ ಅಜೇಯ 12 ರನ್ ಗಳಿಸಿದ್ರು.
ಇಂಗ್ಲೆಂಡ್ ತಂಡ ಪರ ಟಾಮ್ ಕುರನ್ ಮತ್ತು ಬೆನ್ ಸ್ಟೊಕ್ಸ್ ತಲಾ ಎರಡು ವಿಕೆಟ್ ಪಡೆದ್ರೆ, ಸ್ಯಾಮ್ ಕುರನ್ ಮತ್ತು ಆದೀಲ್ ರಶೀದ್ ತಲಾ ಒಂದು ವಿಕೆಟ್ ಪಡೆದ್ರು.
#India #England #teamindia #k.l.rahul #viratkohli #rohithsharma #shikhardhavan #rishabpant #saakshatv #sports #cricket