India vs England: ಟೆಸ್ಟ್ ಕ್ರಿಕೆಟ್ ನ ಚಹರೆಯನ್ನೇ ಬದಲಿಸುತ್ತಿದೆ ಬಾಜ್‌ಬಾಲ್…
India vs England: ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿ 2-2 ರಿಂದ ಸಮಬಲಗೊಂಡಿದೆ. ಈ ಪಂದ್ಯದ ವೇಳೆ ಬಾಝ್ ಬಾಲ್ ಎಂಬ ಪದದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ನಂತರ ಇಂಗ್ಲೆಂಡ್‌ನ ಸಹಾಯಕ ಕೋಚ್ ಪಾಲ್ ಕಾಲಿಂಗ್‌ವುಡ್ ಈ ಪದವನ್ನು ಬಳಸಿದರು. ಪಂತ್ ಬಾಜ್‌ಬಾಲ್ ನಂತೆಯೇ ದೊಡ್ಡ ಪ್ರಮಾಣದಲ್ಲಿ ಕ್ರಿಕೆಟ್ ಆಡುತ್ತಾರೆ ಎಂದು ಅವರು ಹೇಳಿದ್ದರು. ಆನಂತರ ಬಾಜ್‌ಬಾಲ್ ಎಂಬ ಪದದ ಬಗ್ಗೆ ಸಾಕಷ್ಟು ಚರ್ಚೆ ಮತ್ತು ಹುಡುಕಾಟ ನಡೆಯಿತು.
ಬಾಜ್‌ಬಾಲ್ ಎಂಬುದು ಇಂಗ್ಲೆಂಡ್ ತಂಡದಿಂದ ಸೃಷ್ಟಿಸಲ್ಪಟ್ಟ ಪದ. ಇಂಗ್ಲೆಂಡ್‌ನ ಟೆಸ್ಟ್ ಕೋಚ್ ಬ್ರೆಂಡನ್ ಮೆಕಲಮ್ ಅವರ ಅಡ್ಡಹೆಸರು ಬಾಜ್ ಮತ್ತು ಅವರ ಆಟದ ತಂತ್ರ ಬಾಜ್‌ಬಾಲ್. ಬಾಜ್‌ಬಾಲ್ ಕ್ರಿಕೆಟ್‌ನಲ್ಲಿ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ. ಭಾರತದ ವಿರುದ್ಧ ಎಡ್ಜ್‌ಬಾಸ್ಟನ್ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್‌ಗಳ ಸರಣಿಯನ್ನು ಆಡಿ ಕ್ಲೀನ್ ಸ್ವೀಪ್ ಮಾಡಿತ್ತು. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲೂ ಬ್ರಿಟಿಷರ ಇದೇ ತಂತ್ರ ಕೆಲಸ ಮಾಡಿತು. ಮೂರು ದಿನಗಳ ಕಾಲ ಹಿನ್ನಡೆಯಲ್ಲಿದ್ದ ಇಂಗ್ಲೆಂಡ್ ಕೊನೆಯ ಎರಡು ದಿನಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿತು.
ಬಾಜ್‌ಬಾಲ್ ಎಂಬ ಪದವನ್ನ ಎದುರಾಳಿ ತಂಡದ ಮೇಲೆ ಆಕ್ರಮಣಕಾರಿ ಕ್ರಿಕೆಟ್ ಆಡುವಾಗ ಬಳಸಲಾಗುತ್ತದೆ. ಆಟಗಾರ ಆಕ್ರಮಣ ಬ್ಯಾಟಿಂಗ್ ಮಾಡುತ್ತಾ ರನ್ ಗಳಿಸಲು ಮುಂದಾದಾಗ, ಅದನ್ನು ಬಾಜ್‌ಬಾಲ್ ಕ್ರಿಕೆಟ್ ಎಂದು ಕರೆಯಲಾಗುತ್ತದೆ. India vs England: Bazball is changing the face of Test cricket…
ಕ್ರಮೇಣವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡುವ ಸಂಪ್ರದಾಯ ಬೆಳೆಯುತ್ತಿದೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ 111 ಎಸೆತಗಳಲ್ಲಿ 146 ರನ್ ಗಳಿಸಿದ್ದರು. ಅದೇ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ 194 ಎಸೆತಗಳಲ್ಲಿ 104 ರನ್ ಗಳಿಸಿದರು. ಇಂಗ್ಲೆಂಡ್ ಪರ ಜಾನಿ ಬೈರ್‌ಸ್ಟೋ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 106 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 114 ರನ್ ಗಳಿಸಿದ್ದರು.