ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

India vs Newz : ಕ್ಲೀನ್ ಸ್ವೀಪ್ ಸಾಧನೆಯ ಕನಸಿನಲ್ಲಿ ಟೀಮ್ ಇಂಡಿಯಾ..!!

Namratha Rao by Namratha Rao
January 23, 2023
in Newsbeat, News, Sports, ಕ್ರಿಕೆಟ್
Team India
Share on FacebookShare on TwitterShare on WhatsappShare on Telegram

India vs Newz : ಕ್ಲೀನ್ ಸ್ವೀಪ್ ಸಾಧನೆಯ ಕನಸಿನಲ್ಲಿ ಟೀಮ್ ಇಂಡಿಯಾ..!!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಮಂಗಳವಾರ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ.

Related posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

August 29, 2026
KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

August 29, 2026

ಭಾರತ ಪ್ರವಾಸಿಗರನ್ನು 3-0ಯಿಂದ ವೈಟ್‌ವಾಶ್ ಮಾಡುವ ಅವಕಾಶವಿದೆ. ಸತತ ಎರಡು ಏಕದಿನ ಪಂದ್ಯಗಳನ್ನು ಗೆದ್ದು ರೋಹಿತ್ ಶರ್ಮಾ ಪಡೆ ಉತ್ಸಾಹದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾದಿ ಸುಲಭವಲ್ಲ.

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಏಕದಿನ ಪಂದ್ಯಗಳಲ್ಲಿ ಅಜೇಯವಾಗಿದೆ. ಇಂದೋರ್‌ನಲ್ಲಿ ಭಾರತ 5 ಐದು ಏಕದಿನ ಪಂದ್ಯಗಳನ್ನು ಆಡಿದೆ. ಈ ಅಂಗಳದಲ್ಲಿ ಮೊದಲ ODI ಪಂದ್ಯವು ಇಂದೋರ್‌ನಲ್ಲಿ 15 ಏಪ್ರಿಲ್ 2006 ರಂದು ನಡೆದಿತ್ತು.

ಆಗ ಭಾರತ 7 ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು. ಆ ನಂತರ ಟೀಂ ಇಂಡಿಯಾ ಮುಂದಿನ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಭಾರತವು ಈ ಮೈದಾನದಲ್ಲಿ ಇದುವರೆಗೆ ಎರಡು ಬಾರಿ ಇಂಗ್ಲೆಂಡ್ ಅನ್ನು ಸೋಲಿಸಿದೆ ಮತ್ತು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಲಾ ಒಂದು ಬಾರಿ ಸೋಲಿಸಿದೆ.

ನ್ಯೂಜಿಲೆಂಡ್ ತಂಡ ಇಂದೋರ್‌ನಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಲಿದೆ.
ಭಾರತದ ನೆಲದಲ್ಲಿ ಮತ್ತೊಮ್ಮೆ ಏಕದಿನ ಸರಣಿ ಗೆಲ್ಲುವ ನ್ಯೂಜಿಲೆಂಡ್ ಕನಸು ಕನಸಾಗಿ ಉಳಿದಿದೆ.

ಕಿವೀಸ್ ತಂಡವು 1988-89 ರಿಂದ ನಿಯಮಿತ ಓವರ್ ಗಳ ಪಂದ್ಯವನ್ನು ಆಡಲು ಭಾರತಕ್ಕೆ ಬರುತ್ತಿದೆ. ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡ ಏಳನೇ ಬಾರಿಗೆ ಏಕದಿನ ಸರಣಿಯನ್ನು ಆಡುತ್ತಿದೆ.

ಕಳೆದ 34 ವರ್ಷಗಳಲ್ಲಿ ಒಮ್ಮೆಯೂ ಭಾರತದ ನೆಲದಲ್ಲಿ ಏಕದಿನ ಸರಣಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪ್ರಸಕ್ತ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ 12 ರನ್ ಹಾಗೂ ಎರಡನೇ ಪಂದ್ಯದಲ್ಲಿ 8 ವಿಕೆಟ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ.

ಈ ಸರಣಿಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡ ಏಕದಿನದಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ಎರಡನೇ ಏಕದಿನ ಪಂದ್ಯದ ಸೋಲಿನ ನಂತರ ನ್ಯೂಜಿಲೆಂಡ್ ಐಸಿಸಿ ಶ್ರೇಯಾಂಕದಲ್ಲಿ ಒಂದು ಅಂಕವನ್ನು ಕಳೆದುಕೊಳ್ಳಬೇಕಾಯಿತು.

ಸದ್ಯ ಇಂಗ್ಲೆಂಡ್ ತಂಡ 113 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೊನೆಯ ಏಕದಿನ ಪಂದ್ಯವನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ಇಂಗ್ಲೆಂಡ್‌ಗಿಂತ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯಲಿದೆ.

Tags: #saakshatvIndia vs NewzIndia vs Newzealand
ShareTweetSendShare
Join us on:

Related Posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

by Shwetha
August 29, 2026
0

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

by Shwetha
August 29, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

by Shwetha
August 29, 2026
0

ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಎಂದರೆ ಅಲ್ಲಿ ತಳಿರು ತೋರಣಗಳ ಶೃಂಗಾರ, ವಿದ್ಯುತ್ ದೀಪಗಳ ಅಲಂಕಾರ ಮತ್ತು ಮನೆಯ ಹೆಸರಿನ ಫಲಕಗಳು ರಾರಾಜಿಸುವುದು ಸಹಜ. ಆದರೆ ಇಲ್ಲೊಬ್ಬರು...

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

by Shwetha
August 29, 2026
0

ದೆಹಲಿ ಮತ್ತು ಬೆಂಗಳೂರು ನಡುವೆ ಈಗ ಹೊಸ ರಾಜಕೀಯ ಸಂಚಲನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ...

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

by Shwetha
August 29, 2026
0

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram