india vs south africa | ಸಂಕಷ್ಟದಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಔಟ್
ಟಿ 20 ವಿಶ್ವಕಪ್ ನ ಭಾಗವಾಗಿ ಪರ್ಥ್ ನಲ್ಲಿ ನಡೆಯುತ್ತಿರುವ ದಕ್ಷಿಣಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪವರ್ ಪ್ಲೇನಲ್ಲಿ ಆರಂಭಿಕರನ್ನು ಕಳೆದುಕೊಳ್ತು.
ಮೊದಲ ಏಳು ಓವರ್ ಗಳಲ್ಲಿ ಟೀಂ ಇಂಡಿಯಾ ನಾಲ್ಕು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದೆ.
ಆರಂಭಿಕರಾದ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಒಂದಂಕಿಗೆ ಔಟ್ ಆಗಿದ್ದಾರೆ. ಆಫ್ರಿಕಾ ಬೌಲರ್ ಲುಂಕಿ ಎನ್ಗಿಡಿಯ ಓವರ್ ನಲ್ಲಿ ರಾಹುಲ್, ರೋಹಿತ್ ಪೆವಿಲಿಯನ್ ಸೇರಿಕೊಂಡಿದ್ದಾರೆ.
14 ಎಸೆತಗಳಲ್ಲಿ ಎದುರಿಸಿದ ಕೆ.ಎಲ್.ರಾಹುಲ್ ಒಂದು ಸಿಕ್ಸ್ ನೊಂದಿಗೆ 9 ರನ್ ಗಳಿಗೆ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟ್ ನಿರಾಸೆ ಮೂಡಿಸಿದರು.
ಈ ಟೂರ್ನಿಯಲ್ಲಿ ರಾಹುಲ್ ಗೆ ಇದು ಸತತ ಮೂರನೇ ವೈಫಲ್ಯವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 14 ಎಸೆತಗಳಿಗೆ 15 ರನ್ ಗಳಿಸಿ ಔಟಾದರು.
ಈ ಸಂಕಷ್ಟದ ಸ್ಥಿತಿಯಲ್ಲಿ ತಂಡಕ್ಕೆ ನೆರವಾಗುತ್ತಿದ್ದ ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಕೂಡ ಔಟ್ ಆಗಿದ್ದಾರೆ.
11 ಎಸೆತಗಳನ್ನು ಎದುರಿಸಿದ ವಿರಾಟ್ 2 ಬೌಂಡರಿ ಸಿಡಿಸಿ 12 ರನ್ ಗಳಿಗೆ ಔಟ್ ಆಗಿದ್ದಾರೆ. ಲುಂಗಿ ಎನ್ಗಿಡಿ ಈ ಮೂರು ವಿಕೆಟ್ ಗಳನ್ನು ಪಡೆದರು.
ಇನ್ನು ಇದೇ ಮೊದಲ ಬಾರಿಗೆ ಅವಕಾಶ ಪಡೆದ ದೀಪಕ್ ಹೂಡ ಕೂಡ ಒಂದಂಕಿಗೆ ಔಟ್ ಆಗಿದ್ದಾರೆ.