India | 23 ವರ್ಷಗಳ ನಂತರ ಇಂಗ್ಲೆಂಡ್ ನಲ್ಲಿ ಭಾರತಕ್ಕೆ ಸರಣಿ
ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಹೊಸ ಚರಿತ್ರೆಯನ್ನು ನಿರ್ಮಿಸಿದೆ.
ಬರೋಬ್ಬರಿ 23 ವರ್ಷಗಳ ನಂತರ ಬ್ರಿಟಿಷ್ ನೆಲದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಹರ್ಮನ್ ಪ್ರಿತ್ ಕೌರ್ ತುಫಾನಿ ಇನ್ನಿಂಗ್ಸ್ ನೊಂದಿಗೆ ಭಾರತ ಮಹಿಳಾ ತಂಡ 88 ರನ್ ಗಳ ಅಂತರ ಗೆಲುವು ಸಾಧಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 333 ರನ್ ಗಳನ್ನು ಗಳಿಸಿದರು.
ಭಾರತ ಕ್ಯಾಪ್ಟನ್ ಹರ್ಮನ್ ಪ್ರಿತ್ ಕೌರ್ 111 ಎಸೆತಗಳಲ್ಲಿ 143 ರನ್ ಗಳಿಸಿದರು.
ಭಾರತದ ಪರ ಓಪನರ್ ಶಫಾಲಿ ವರ್ಮಾ 8 ರನ್, ಸ್ಮೃತಿ ಮಂದಾನ 40 ರನ್, ಯಸ್ತಿಕ ಭಾಟಿಯಾ 26 ರನ್ ಗಳಿಸಿದರು.
ಹರ್ಮನ್ ಆಕರ್ಷಕ ಬ್ಯಾಟಿಂಗ್ ಮಾಡಿ ಏಕದಿನ ಕ್ರಿಕೆಟ್ ನಲ್ಲಿ 5 ನೇ ಶತಕ ಸಿಡಿಸಿದರು.
ಹರ್ಲಿನ್ ಡಿಯಾಲ್ 58 ರನ್, ಪೂಜಾ ವಸ್ತ್ರಾಕರ್ 18 ರನ್, ದೀಪ್ತಿ ಶರ್ಮಾ 15 ರನ್ ಗಳಿಸಿದರು.
ಭಾರಿ ಸ್ಕೋರ್ ಗುರಿಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡ 44.2 ಓವರ್ ಗಳಲ್ಲಿ 245 ರನ್ ಗಳಿಗೆ ಆಲ್ ಔಟ್ ಆಯ್ತು. ಡಿನಿಯಲ್ ವ್ಯಾಟ್ 65 ರನ್ ಗಳನ್ನು ಗಳಿಸಿದ್ದು ಬಿಟ್ಟರೇ ಬೇರೆ ಯಾರು ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ.
ಭಾರತ ಪರ ರೇಣುಕಾ ಸಿಂಗ್ 4 ವಿಕೆಟ್, ದಯಾಲನ್ ಹೇಮಲತಾ 2 ವಿಕೆಟ್, ದೀಪ್ತಿ ಶರ್ಮಾ, ಶಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದರು.
ಇದರೊಂದಿಗೆ ಟೀಂ ಇಂಡಿಯಾ ಮೂರು ಮ್ಯಾಚ್ ಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ 2 -0 ಅಂತರದಲ್ಲಿ ಗೆದ್ದುಕೊಂಡಿದೆ.