ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ದಾಖಲೆ ಸೃಷ್ಟಿಸಿದೆ.
ಉಭಯ ತಂಡಗಳ ನಡುವೆ ನಡೆಯುತ್ತಿರುವ ಐದನೇ ಟೆಸ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಟಾಪ್ ಐವರು ಬ್ಯಾಟರ್ಸ್ಗಳು 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಸಿಡಿಸಿದ್ದರೆ, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಅರ್ಧಶತಕ ಬಾರಿಸಿದ್ದಾರೆ. 50ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆಯನ್ನು ಮೂರನೇ ಬಾರಿಗೆ ನಿರ್ಮಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ.
ಭಾರತ 1998 ರಲ್ಲಿ ಈ ಸಾಧನೆ ಮಾಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಬಂದ ವಿವಿಎಸ್ ಲಕ್ಷ್ಮಣ್ 95, ನವಜೋತ್ ಸಿಂಗ್ ಸಿಧು 97 ರನ್, ರಾಹುಲ್ ದ್ರಾವಿಡ್ 86 ರನ್, ಸಚಿನ್ ತೆಂಡೂಲ್ಕರ್ 79 ರನ್ ಗಳಿಸಿದ್ದರು. ಈ ವೇಳೆ ನಾಯಕ ಮೊಹಮ್ಮದ್ ಅಜರುದ್ದೀನ್ 163 ರನ್ ಗಳಿಸಿ ಶತಕ ಸಿಡಿಸಿದ್ದರು. ಇದಾದ ನಂತರ 6ನೇ ಕ್ರಮಾಂಕದಲ್ಲಿ ಬಂದಿದ್ದ ಸೌರವ್ ಗಂಗೂಲಿ ಕೂಡ 65 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 219 ರನ್ಗಳಿಂದ ಗೆದ್ದುಕೊಂಡಿತ್ತು.
1999ರಲ್ಲಿ ಮೊಹಾಲಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಈ ದಾಖಲೆ ಮಾಡಲಾಗಿತ್ತು. ದೇವಾಂಗ್ ಗಾಂಧಿ 75, ಸಡಗೋಪನ್ ರಮೇಶ್ 73, ರಾಹುಲ್ ದ್ರಾವಿಡ್ 144, ನಾಯಕ ಸಚಿನ್ ತೆಂಡೂಲ್ಕರ್ 126, ಸೌರವ್ ಗಂಗೂಲಿ 64 ರನ್ ಕಲೆಹಾಕಿದ್ದರು. ಈ ಪಂದ್ಯ ಡ್ರಾ ಆಗಿತ್ತು.
2009 ರಲ್ಲಿ ಶ್ರೀಲಂಕಾ ವಿರುದ್ಧ ಮುರಳಿ ವಿಜಯ್ 87, ವೀರೇಂದ್ರ ಸೆಹ್ವಾಗ್ 293 ರನ್, ರಾಹುಲ್ ದ್ರಾವಿಡ್ 74, ಸಚಿನ್ ತೆಂಡೂಲ್ಕರ್ 53, ವಿವಿಎಸ್ ಲಕ್ಷ್ಮಣ್ 62 ಗಳಿಸಿದ್ದರು. ಈ ವೇಳೆ ಭಾರತ ಇನ್ನಿಂಗ್ಸ್ ಮತ್ತು 24 ರನ್ಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈಗ 15 ವರ್ಷಗಳ ನಂತರ ಇದನ್ನು ಆಟಗಾರರು ಪುನರಾವರ್ತಿಸಿದ್ದಾರೆ. ಯಶಸ್ವಿ ಜೈಸ್ವಾಲ್ 57, ರೋಹಿತ್ ಶರ್ಮಾ 103, ಶುಭಮನ್ ಗಿಲ್ 110, ದೇವದತ್ ಪಡಿಕ್ಕಲ್ 65 ಮತ್ತು ಸರ್ಫರಾಜ್ ಖಾನ್ 56 ರನ್ ಗಳಿಸಿದ್ದಾರೆ.