ಏಷ್ಯನ್ ಗೇಮ್ಸ್‌ನ (Asian Games) 14 ನೇ ದಿನವೂ ಭಾರತ ಪದಕ ಬೇಟೆ ಆರಂಭಿಸಿದೆ. ಬಿಲ್ಲುಗಾರಿಕೆಯಲ್ಲಿ ಭಾರತ ನಾಲ್ಕು ಪದಕ ಗೆದ್ದ ಬೆನ್ನಲ್ಲಿಯೇ ಮಹಿಳೆಯರ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ ದೊರಕಿದೆ.
ಈ ಭಾರತ ಏಷ್ಯನ್ ಗೇಮ್ಸ್ನಲ್ಲಿ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಏಷ್ಯನ್ ಗೇಮ್ಸ್ನಲ್ಲಿ ಇದುವರೆಗೆ ಭಾರತ 100 ಪದಕಗಳನ್ನು ಗೆದ್ದಿರಲಿಲ್ಲ. 2018 ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ದಾಖಲೆಯ 70 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಸದ್ಯ ತನ್ನೆಲ್ಲ ದಾಖಲೆ ಮುರಿದು, ಹೊಸ ಇತಿಹಾಸ ನಿರ್ಮಿಸಿದೆ.
ಆರಂಭದಲ್ಲಿ ಜ್ಯೋತಿ ವೆನ್ನಮ್ ಅವರು ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದರು. ಅದಿತಿ ಸ್ವಾಮಿ ಅವರು ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. 2023 ರ ಏಷ್ಯನ್ ಗೇಮ್ಸ್‌ನಲ್ಲಿ ಜ್ಯೋತಿ ಅವರ ಮೂರನೇ ಚಿನ್ನದ ಪದಕ ಇದಾಗಿದೆ. ಈ ಹಿಂದೆ ಮಹಿಳಾ ಕಾಂಪೌಂಡ್ ಮತ್ತು ಮಿಶ್ರ ಸಂಯುಕ್ತ ತಂಡಗಳ ಈವೆಂಟ್‌ಗಳಲ್ಲಿ ಪದಕ ಗೆದ್ದಿದ್ದಾರೆ. ಆರಂಭದಲ್ಲಿ ಜ್ಯೋತಿ ವೆನ್ನಮ್ ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.