2022ರ ವಿಶ್ವಕಪ್ ನಲ್ಲಿ ಇಂಡೋ-ಪಾಕ್ ಕದನ Indo-Pak saaksha tv
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಂದ್ರೆ ಸಾಕು ಅದಕ್ಕೆ ವಿಶ್ವಕಪ್ ಫೈನಲ್ನ ಗಿಂತಲೂ ಹೆಚ್ಚು ಮಹತ್ವದ ಇರುತ್ತದೆ. ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲಿ ಸೆಣಸಾಡಿದ್ದವು. ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗುತ್ತಿದೆ. ಆದರೆ ಈ ಬಾರಿ ಕಡುವೈರಿಗಳ ಹೋರಾಟದಲ್ಲಿ ಟ್ವಿಸ್ಟ್ ಇದೆ.
ಅಂದಹಾಗೇ ಇದು ಪುರುಷರ ಕ್ರಿಕೆಟ್ ವಿಶ್ವಕಪ್ ಫೈಟ್ ಅಲ್ಲ. ಬದಲಾಗಿ ಮಹಿಳಾ ವಿಶ್ವಕಪ್ ನಲ್ಲಿ ಕಡುವೈರಿಗಳ ನಡುವಿನ ಕದನ. ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು 2022ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭಾರತ, ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ತನ್ನ ಪಂದ್ಯಾವಳಿಯನ್ನು ಆರಂಭಿಸಲಿದೆ. ಮಾರ್ಚ್ 6 ರಲ್ಲಿ ಬೇ ಓವಲ್ ಟೌರಂಗದಲ್ಲಿ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ಟೂರ್ನಿಯನ್ನು ಆಯೋಜಿಸಿದ್ದು, ಮಾರ್ಚ್ 4ರಂದು ವೆಸ್ಟ್ಇಂಡೀಸ್ ಅನ್ನು ಎದುರಿಸುವ ಮೂಲಕ ವಿಶ್ವಕಪ್ ಆರಂಭವಾಗಲಿದೆ.
ಹಿಂದಿನ ಲೆಕ್ಕಾಚಾರದಂತೆ ವಿಶ್ವಕಪ್ 2021ರ ಫೆಬ್ರವರಿ- ಮಾರ್ಚ್ನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ವಿಶ್ವಕಪ್ಗೆ ಆತಿಥೇಯ ತಂಡವಾಗಿರುವ ನ್ಯೂಜಿಲೆಂಡ್ ಸಹಜ ಪ್ರವೇಶ ಪಡೆದರೆ, ಭಾರತ, ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2017-20 ಐಸಿಸಿ ಮಹಿಳಾ ಚಾಂಪಿಯನ್ಶಿಪ್ ಆಧಾರದಲ್ಲಿ ಅರ್ಹತೆ ಪಡೆದಿವೆ. 8 ತಂಡಗಳು ಟೂರ್ನಿಯನ್ನು ಭಾಗವಹಿಸಲಿವೆ.
ಮೊದಲ ಸೆಮಿಫೈನಲ್ ಪಂದ್ಯ ವೆಲ್ಲಿಂಗ್ಟನ್ನಲ್ಲಿ ನಡೆಯಲಿದ್ದು, ಎರಡನೇ ಸೆಮಿಫೈನಲ್ ಪಂದ್ಯ ಮತ್ತು ಫೈನಲ್ ಪಂದ್ಯಗಳು ಕ್ರಿಸ್ಟ್ಚರ್ಚ್ನಲ್ಲಿ ನಡೆಯಲಿದೆ. 2017ರಲ್ಲಿ ನಡೆದಿದ್ದ ಕಡೆಯ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ರೋಚಕ ಕದನದಲ್ಲಿ ಭಾರತವನ್ನು ಮಣಿಸಿ, ಚಾಂಪಿಯನ್ ಆಗಿತ್ತು. ಈ ಬಾರಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದ್ದು, ಈಗಾಗಲೇ ಕ್ರೀಡಾಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ.