Infinix Hot 12 : ಹೊಸ ಸ್ಮಾರ್ಟ್ಫೋನ್
9,499 ರೂಪಾಯಿಗೆ ಸ್ಮಾರ್ಟ್ ಫೋನ್
ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ
4GB RAM + 64GB ಸ್ಟೋರೇಜ್ ಸಾಮರ್ಥ್ಯ
ಆ.23 ರಂದು ಮಧ್ಯಾಹ್ನ 12 ಗಂಟೆಯಿಂದ ಸೇಲ್
ಕಡಿಮೆ ಬೆಲೆಗೆ ಆಕರ್ಷಕ ಫೋನ್ ಗಳನ್ನು ರಿಲೀಸ್ ಮಾಡುವ ಇನ್ಪಿನಿಕ್ಸ್ ಕಂಪನಿ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ರಿಲೀಸ್ ರೆಡಿಯಾಗಿದೆ.
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇಯಾದ ಗ್ರಾಹಕರನ್ನು ಹೊಂದಿರುವ ಇನ್ಫಿನಿಕ್ಸ್ ಕಂಪನಿಯ ಫೋನ್ ಗಳಿಗೆ ಭಾರಿ ಬೇಡಿಕೆ ಇದೆ.
ಆ ಬೇಡಿಕೆಯನ್ನು ತಣಿಸುವ ಉದ್ದೇಶದಿಂದ ಕಂಪನಿ ಭಾರತರದಲ್ಲಿ ಹೊಸ ಇನ್ಫಿನಿಕ್ಸ್ ಹಾಟ್ 12 ಅನ್ನು ಅನಾವರಣ ಮಾಡಿದೆ.
ಈ ಸ್ಮಾರ್ಟ್ ಫೋನ್ 6 ಸಾವಿರ mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
9499 ರುಪಾಯಿಯ ಈ ಸ್ಮಾರ್ಟ್ ಫೋನ್ 4 GB RAM + 64 GB ಸ್ಟೋರೇಜ್ ಹೊಂದಿದೆ.
ಫ್ಲಿಪ್ ಕಾರ್ಟ್ ಮೂಲಕ ಇದೇ ಆಗಸ್ಟ್ 23 ರಂದು ಮಧ್ಯಹ್ನಾ 12 ಗಂಟೆಯಿಂದ ಸೇಲ್ ಕಾಣಲಿದೆ.

ಇನ್ಫಿನಿಟ್ ಹಾಟ್ 12 ಸ್ಮಾರ್ಟ್ ಫೋನ್ 6.82 ಇಂಚಿನ ಹೆಚ್ ಡಿ ಡಿಸ್ ಪ್ಲೇಯನ್ನು ಹೊಂದಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಎ 1 ಕ್ಯಾಮೆರಾಗಳನ್ನು ಒಳಗೊಂಡಿವೆ. ಇಲ್ಲದೇ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಇದಲ್ಲದೇ ಹಲವು ವಿಶೇಷತೆಗಳು ಈ ಸ್ಮಾರ್ಟ್ ಫೋನ್ ನಲ್ಲಿವೆ.








