ಹಾಂಗ್ಕಾಂಗ್ ಮೂಲದ ಸ್ಮಾರ್ಟ್ಫೋನ್ ತಯಾರಕ ಇನ್ಫಿನಿಕ್ಸ್ ಕಂಪೆನಿ ಇದೀಗ ತನ್ನ ಹೊಸ ಸ್ಮಾರ್ಟ್ ಫೋನ್ ಇನ್ಫಿನಿಕ್ಸ್ ಹಾಟ್ 9 ಸರಣಿಯ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ.
ಇನ್ಫಿನಿಕ್ಸ್ ಹಾಟ್ 9 ಸರಣಿಯ ಸ್ಮಾರ್ಟ್ಫೋನ್ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ 256GB ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಿಬಹುದಾಗಿದೆ.
ಇನ್ಫಿನಿಕ್ಸ್ ಹಾಟ್ 9 ಸರಣಿಯ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ A25 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್ಫೋನ್ ಮ್ಯಾಟ್ ಬ್ಲ್ಯಾಕ್, ಸಯಾನ್, ವೈಲೆಟ್ ಮತ್ತು ಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಇನ್ಫಿನಿಕ್ಸ್ ಹಾಟ್ 9 ಸ್ಮಾರ್ಟ್ಫೋನ್ 6.6-ಇಂಚಿನ ಡಿಸ್ಪ್ಲೇಯನ್ನ ಹೊಂದಿರಲಿದ್ದು, ಎಚ್ಡಿ + ಐಪಿಎಸ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರಲಿದೆ. ಅಷ್ಟೇ ಅಲ್ಲ ಡಿಸ್ಪ್ಲೇಯು ಪಂಚ್ಹೋಲ್ ವಿನ್ಯಾಸವನ್ನು ಹೊಂದಿದ್ದು, ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾ AI ಬೆಂಬಲಿತ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. 5,000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಪ್ ಅನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಹಾಟ್ಸ್ಪಾಟ್, ವೈಫೈ, ಬ್ಲೂಟೂತ್ ಮುಂತಾದ ಕನೆಕ್ಟಿವಿಟಿ ವೈಶಿಷ್ಟ್ಯತೆ ಗಳನ್ನು ಹೊಂದಿದೆ.
ಫ್ಲಿಪ್ಕಾರ್ಟ್ ವೆಬ್ ಸೈಟ್ ನಲ್ಲಿ ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ಇನ್ಫಿನಿಕ್ಸ್ ಹಾಟ್ 9 ಸರಣಿಯನ್ನು ಅನಾವರಣಗೊಳಿಸಲಾಗುವುದು.
ಭಾರತದಲ್ಲಿ ಇದು ಯಾವ ಬೆಲೆಗೆ ಲಭ್ಯವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ.