ವಾಷಿಂಗ್ಟನ್ : ನಾವು ಹಲವಾರು ಇಂಗ್ಲಿಷ್ ಸಿನಿಮಾಗಳಲ್ಲಿ ವಿವಿಧ ರೀತಿಯ ಕೀಟಗಳು ಮನುಷ್ಯನನ್ನು ಭೀಕರವಾಗಿ ತಿಂದು ಹತ್ಯೆ ಮಾಡಿ ತಿನ್ನುವುದನ್ನು ನೋಡಿದ್ದೇವೆ. ಹಾಗೆಯೇ ಸಿನಿಮೀಯ ಮಾದರಿಯಲ್ಲಿ ಕೀಟಗಳು ಮತ್ತು ತಿಗಣೆ ಕೈದಿಯೊಬ್ಬನನ್ನು ಜೀವಂತವಾಗಿ ತಿಂದುಹಾಕಿರುವ ಭಯಾನಕ ಘಟನೆ ನಡೆದಿದೆ.
ಅಮೆರಿಕದ ಅಟ್ಲಾಂಟಾದ ಜೈಲಿನಲ್ಲಿದ್ದ (US Atlanta Jail) 35 ವರ್ಷದ ಕೈದಿಯೊಬ್ಬನನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿವೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದು, ಮೃತ ವ್ಯಕ್ತಿಯ ಕುಟುಂಬವು ಈಗ ಅವರ ಸಾವಿನ ಬಗ್ಗೆ ಕ್ರಿಮಿನಲ್ ತನಿಖೆಗೆ ಒತ್ತಾಯಿಸಿದ್ದು, ಜೈಲನ್ನು ಮುಚ್ಚಬೇಕು ಮತ್ತು ಅಲ್ಲಿನ ಕೈದಿಗಳನ್ನ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದೆ.
ಯುಎಸ್ ಪೊಲೀಸರ (US Police) ಪ್ರಕಾರ, 2022ರ ಜೂನ್ 12 ರಂದು ಲಾಶಾನ್ ಥಾಂಪ್ಸನ್ ಎಂಬ ವ್ಯಕ್ತಿಯನ್ನು ಅಟ್ಲಾಂಟಾದಲ್ಲಿ ಬಂಧಿಸಿ, ಫುಲ್ಟನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿತ್ತು. ಆದರೆ ವಿಚಾರಣೆಯ ನಂತರ ಆತನನ್ನ ಮಾನಸಿಕ ಅಸ್ವಸ್ಥ ಎಂದು ಪರಿಗಣಿಸಿ ಮನೋವೈದ್ಯಕೀಯ ವಿಭಾಗದಲ್ಲಿ ಇರಿಸಲಾಗಿತ್ತು. ಪೊಲೀಸರು ಸಿಆರ್ಪಿಸಿ ಅನ್ವಯ ತನಿಖೆ ಪ್ರಕ್ರಿಯೆ ಆರಂಭಿಸಿದ್ದರು. ಆತನ ಹೇಳಿಕೆ ಪಡೆಯಲು 2022ರ ಸೆಪ್ಟೆಂಬರ್ 13ರಂದು ಹೋದಾಗ ಥಾಂಪ್ಸನ್ ಪ್ರತಿಕ್ರಿಯಿಸಲಿಲ್ಲ. ನಂತರ 3 ತಿಂಗಳ ನಂತರ ಆತ ಕೊಠಡಿಯಲ್ಲಿಯೇ ಸಾವನ್ನಪ್ಪಿರುವುದು ತಿಳಿದು ಬಂದಿದೆದ.
ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತ ಕುಟುಂಬ ಪರ ವಕೀಲರು, ಥಾಂಪ್ಸನ್ ಅವರನ್ನ ಕೊಳಕು ತುಂಬಿದ ಕೋಣೆಯಲ್ಲಿ ಇರಿಸಲಾಗಿತ್ತು. ಹೀಗಾಗಿ ತಾನು ಮಲಗುತ್ತಿದ್ದ ಹಾಸಿಗೆಯಲ್ಲಿ ಕೀಟಗಳು ಹೆಚ್ಚಾಗಿ, ಮೂರು ತಿಂಗಳ ನಂತರ ಕೀಟಗಳಿಂದ ಜೀವಂತವಾಗಿ ತಿನ್ನಲ್ಪಟ್ಟಿದ್ದಾನೆ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಸಹ ಅವರ ದೇಹದಲ್ಲಿ ಗಾಯಗಳಿಲ್ಲ ಹಾಗೂ ರೋಗ ಲಕ್ಷಣಗಳೂ ಇರಲಿಲ್ಲ ಎಂಬುವುದನ್ನು ತಿಳಿಸಿದೆ. ಫುಲ್ಟನ್ ಕೌಂಟಿ ಜೈಲಿನ ಅನೈರ್ಮಲ್ಯ ಪರಿಸ್ಥಿತಿಯೇ ಥಾಂಪ್ಸನ್ ಸಾವಿಗೆ ಕಾರಣ. ಜೈಲಿನ ಕೊಠಡಿಗಳ ಶುಚಿತ್ವ ಗಮನಿಸಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಜೈಲಿನೊಳಗೆ ತೆಗೆದ ಚಿತ್ರಗಳನ್ನು ನೋಡಿದರೆ, ಎಷ್ಟು ಕೊಳಕು ತುಂಬಿಕೊಂಡಿತ್ತು ಎನ್ನುವುದು ಅರ್ಥವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.








