ಪೊಲೀಸರ ಸಮವಸ್ತ್ರ ಯಾಕೆ ಖಾಕಿ ಬಣ್ಣದಲ್ಲೇ ಇರುತ್ತೆ, ಭಾನುವಾರದಂದೇ ರಜೆ ಯಾಕೆ..? : 4 ಕುತೂಹಲಕಾರಿ ವಿಚಾರಗಳು..!
ಹೆಲೋ ಫ್ರೆಂಡ್ಸ್
ನಮ್ಮ ದೈನಂದಿನ ಬದುಕಿನಲ್ಲಿ ಅನೇಕ ರೂಢಿಗಳಿವೆ. ಅದನ್ನ ಪಾಲಿಸುತ್ತಾ ಬಂದಿದ್ದೇವೆ. ಆದ್ರೆ ಕೆಲವೊಮ್ಮೆ ಇದೇ ನಿಯಮ ಯಾಕಿದೆ. ಯಾವಾಗಿನಿಂದ ಶುರುವಾಯಿತು. ಕಾರಣವೇನು ಅನ್ನೋ ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಯಾಕೆ ಅಂತ ಯೋಚನೆನೂ ಮಾಡಿರುವುದಿಲ್ಲ. ಉದಾಹರಣಗೆ ಯಾಕೆ ಪೊಲೀಸರ ಸಮವಸ್ತ್ರದ ಬಣ್ಣ ಖಾಕಿಯೇ ಆಗಿರುತ್ತೆ. ಹೀಗೆ ಕೆಲ ವಿಚಾರಗಳ ಬಗ್ಗೆ ನಾವು ಇವತ್ತು ತಿಳಿಯೋಣ.
ಮೊದಲಿಗೆ ಗಗನಸಖಿಯರು ಯಾಕೆ ವಿಮಾನಕ್ಕೆ ಪ್ರಯಾಣಿಕರು ಹತ್ತಬೇಕಾದ್ರೆ ಸದಾ ತಮ್ಮ ಕೈಗಳನ್ನ ಹಿಂದೆ ಕಟ್ಟಿರುತ್ತಾರೆ. ಎಲ್ಲರು ಅಂದುಕೊಂಡಿರುವಂತೆ ಅವರು ತಮ್ಮ ಕೈಗಳನ್ನ ಹಿಂದೆ ಕಟ್ಟುವುದು ಪ್ರಯಾಣಿಕರಿಗೆ ಗೌರವ ಸೂಚಿಸೋಕೆ ಅಲ್ಲ. ಹಾ ಅದು ಪ್ರಯಾಣಿಕರನ್ನ ಆಹ್ವಾನಿಸುವ ಒಂದು ಸೌಜನ್ಯಕರ ವಿಧಾನ ಅಷ್ಟೇ. ಆದ್ರೆ ಅಸಲಿಗೆ ಅವರು ಕೈಗಳನ್ನ ಹಿಂದೆ ಕಟ್ಟಿ ಪ್ರಯಾಣಿಕರ ಸಂಖ್ಯೆಯನ್ನ ಎಣಿಸುತ್ತಿರುತ್ತಾರೆ. ಗಗನಸಖಿಯರು ಅಥವ ಫ್ಲೈಟ್ ಅಟೆಂಡರ್ಸ್ ಗೆ ಟ್ರೈನಿಂಗ್ ವೇಳೆ ಈ ಟೆಕ್ನಿಕ್ ಅನ್ನ ಹೇಳಿಕೊಡಲಾಗಿರುತ್ತೆ.
ಇನ್ನೂ ನಮ್ಮ ದೇಶದ ಅವಿಭಾಜ್ಯ ಅಂಗ. ಹಗಲಿರುಳು ಅಪರಾಧಗಳನ್ನ ತಡೆದು ನಮಗೆ ರಕ್ಷಣೆ ಕೊಡಲು ಶ್ರಮಿಸುವ ಪೊಲೀಸರು ಯಾಕೆ ಖಾಕಿ ಬಣ್ಣದ ಸಮವಸ್ತ್ರವನ್ನೇ ಧರಿಸುತ್ತಾರೆ. ಅದಕ್ಕೂ ಮೊದಲು ಪೊಲೀಸರು ಯೂನಿಪಾರ್ಮ್ ಧರಿಸುವ ಪದ್ದತಿ ಶುರುವಾಗಿದ್ದು ಯಾವಾಗಿನಿಂದ ಅನ್ನುವುದನ್ನ ನೋಡೋಣ. ಬಿಪಿಆರ್ ಡಿ ವರದಿಯ ಅನುಸಾರ ಮೊದಲ ಬಾರಿಗೆ ಪೊಲೀಸರು ಸಮವಸ್ತ್ರ ಧರಿಸಲು ಶುರುಮಾಡಿದ್ದು ಲಂಡನ್ ನಲ್ಲಿ 1820ರಲ್ಲಿ. ಆ ಸಮಯದಲ್ಲಿ ಅವರ ಯೂನಿಫಾರ್ಮ್ ನ ಬಣ್ಣ ಡಾರ್ಕ್ ಬ್ಲೂ ಇತ್ತು. ಇದಾದ ನಂತರ ಇತರೇ ರಾಷ್ಟ್ರಗಳಲ್ಲಿ ಪೊಲೀಸರಿಗೆ ಸಮವಸ್ತ್ರ ಜಾರಿಗೊಳಿಸಲು ಅಲ್ಲಿನ ಸರ್ಕಾರಗಳು ಆರಂಭಿಸಿದವು. ಈಗ ನಾವು ಭಾರತದಲ್ಲಿ ಪೊಲೀಸರ ಸಮವಸ್ತ್ರದ ಬಣ್ಣ ಯಾಕೆ ಖಾಕಿಯೇ ಎನ್ನುವುದನ್ನ ನೋಡೋದಾದ್ರೆ , ಬ್ರಿಟೀಷರು ಭಾರತವನ್ನ ಆಕ್ರಮಿಸಿಕೊಂಡಿದ್ದ ವೇಲೆ ಪೊಲೀಸರ ಸಮವಸ್ತ್ರದ ಬಣ್ಣ ಬಿಳಿಯಿತ್ತು. ಆದ್ರೆ ಈ ಬನ್ಣದ ಯೂನಿಪಾರ್ಮ್ ಬೇಗನೇ ಕೊಳೆಯಾಗ್ತಿದ್ದ ಹಿನ್ನೆಲೆ ಖಾಕಿ ಬಣ್ಣದ ಸಮವಸ್ತ್ರವನ್ನ ಆಗಿನ ಬ್ರಟೀಷ್ ಅಧಿಕಾರಿಗಳು ಜಾರಿಗೆ ತಂದಿದ್ದರು. ವಿಶೇಷ ಅಂದ್ರೆ ಅಧಿಕಾರಿಗಳಿಗೆ ಈ ಸಮವಸ್ತ್ರದ ಬಣ್ಣ ಖಾಕಿಗೆ ತಿರುತ್ತದೆ ಎನ್ನುವ ವಿಚಾರ ಗೊತ್ತಿರಲಿಲ್ಲ. ಅಸಲಿಗೆ ಯಾವುದಾದರೂ ಒಂದು ಬಣ್ಣವನ್ನ ಸಮವಸ್ತ್ರಕ್ಕಾಗಿ ಬಳಸಬೇಕು ಎಂದು ಹೊರಟಿದ್ದ ಅಧಿಕಾರಿಗಳು ಟೀಸಪ್ಪನ್ನ ಬಳಸಿ ಒಂದು ಬಣ್ಣದಿಂದ ಸಮವಸ್ತ್ರ ತಯಾರಿಸಿದಾಗ ಅದು ಖಾಕಿ ಬಣ್ಣದಲ್ಲಿತ್ತು. ಆಗ ಅದನ್ನೇ ಪ್ರತಿ ಪೊಲೀಸ್ ಅಧಿಕಾರಿಯ ಸಮವಸ್ತ್ರವಾಗಿ ಜಾರಿಗೊಳಿಸಲಾಯ್ತು.
ಭಾನುವಾರವೇ ರಜೆ ಯಾಕೆ..?
ಹಿರಿಯರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಭಾನುವಾರಕ್ಕಾಗಿ ಕಾಯುತ್ತಿರುತ್ತಾರೆ. ಕಾರಣ ಅಂದು ಎಲ್ಲರಿಗೂ ರಜೆ ಇರುತ್ತೆ ಅಂತ. ಆದ್ರೆ ವಾರದಲ್ಲಿ 7 ದಿಗಳಿದ್ರೂ ಯಾಕೆ ಭಾನುವಾರವೇ ರಜೆಯಿರುತ್ತೆ ಗೊತ್ತಾ.. ಭಾರತದಲ್ಲಿ ಬ್ರಿಟೀಷರ ಆಡಳಿತವಿದ್ದ ಕಾಲದಲ್ಲಿ ಭಾರತೀಯ ಪುರುಷ ಕಾರ್ಮಿಕರು ಯಾವುದೇ ರಜೆಗಳಲ್ಲಿದೇ ನಿರಂತರ ಕೆಲಸ ಮಾಡಬೇಕಾಗಿತ್ತು. ಆದ್ರೆ ಬ್ರಟೀಷ್ ಅಧಿಕಾರಿಗೆ ಮಾತ್ರ ವಾರದಲ್ಲಿ ಒಂದು ದಿನ ರಜೆ ಇರುತಿತ್ತು. ಆದ್ರೆ ಆಗಿನ ಪುರುಷ ಕಾರ್ಮಿಕರ ನಾಯಕರಾಗಿದ್ದ ನಾರಾಯಣ್ ಮೇಘಾಜಿ ಲೋಕಾಂಡೆ ಅವರು ಬ್ರಿಟೀಷರ ಮುಂದೆ ಒಂದು ದಿನದ ರಜೆಯ ಪ್ರಸ್ತಾವನೆಯನ್ನ ಇಟ್ಟಿದ್ದರು. ವಾರದಲ್ಲಿ 6 ದಿನಗಳ ಕಾಲ ಮಾತ್ರವೇ ಕೆಲಸ ಮಾಡಿಸಿ ಒಂದು ದಿನ ರಜೆ ನೀಡಬೇಕು ಎಂದು ಒತ್ತಾಯಿಸಿದ್ರು. ಆದ್ರೆ ಬ್ರಿಟೀಷರು ಈ ಪ್ರಸ್ತಾವನೆಯನ್ನ ತಿರಸ್ಕರಿಸಿದ್ದರು. ಆದರೂ ಲೋಕಾಂಡೆಯವರು ಪದೇ ಪದೇ ತಮ್ಮ ಪ್ರಸ್ತಾವನೆಯನ್ನ ಸಲ್ಲಿಸುತ್ತಲೇ ಬಂದಿದ್ದರು. ಇದಾದ ಬಳಿಕ ಅಂದ್ರೆ 7 ವರ್ಷಗಳ ಸಂಘರ್ಷದ ಬಳಿಕ 1890 ರಲ್ಲಿ ಬ್ರಿಟೀಷ್ ಸರ್ಕಾರವು ಬಾನುವಾರ ರಜಾ ದಿನವಾಗಿ ಘೋಷಣೆ ಮಾಡಿತ್ತು. ಆಗಿನಿಂದ ಎಲ್ಲಾ ನೌಕರರಿಗೂ, ಪ್ರತಿ ವಾರದ ಭಾನುವಾರದಂದು ರಜೆ ನೀಡುವ ಪದ್ದತಿ ಜಾರಿಗೆ ಬಂತು. ಆದ್ರೆ ಬಾನುವಾರವೇ ಯಾಕೆ ಅಂದ್ರೆ ಆಗ ಬ್ರಟೀಷ್ ಅಧಿಕಾರಿಗಳು ಭಾನುವಾರದಂದು ಚರ್ಚ್ ಗಳಿಗೆ ತೆರಳಲು ರಜೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಾರ್ಮಿಕರಿಗೂ ಭಾನುವಾರವೇ ರಜೆ ನಿಗದಿ ಮಾಡಲಾಗಿತ್ತು.
ವಕೀಲರು ಯಾಕೆ ಕಪ್ಪು ಕೋಟ್ ಧರಿಸುತ್ತಾರೆ.
ವಕೀಲರು ಅಂದ ತಕ್ಷಣ ಕಣ್ಣಮುಂದೆ ಕಪದಪು ಕೋಟ್ ಬರುತ್ತೆ. ಆದ್ರೆ ಯಾಕೆ ವಕೀಲರು ವಕಾಲತ್ತಿನ ವೇಳೆ ಕಪ್ಪು ಕೋಟ್ ಅನ್ನೇ ಧರಿಸುತ್ತಾರೆ. ಈ ವಿಚಾರ ಯಾರಿಗೂ ಗೊತ್ತಿರುವುದಿಲ್ಲ. ಅಷ್ಟಕ್ಕೂ ಇದು ಶುರುವಾಗಿದ್ದು 1327 ರಲ್ಲಿ. ಮೊದಲ ಬಾರಿಗೆ ಎಡ್ವರ್ಟ್ ಎಂಬಾತ ವಕಾಲತ್ತು ಮಾಡಲು ಶುರು ಮಾಡಿದ್ದರು. ಅಲ್ಲಿಂದಲೇ ವಕೀಲರ ಸಮವಸ್ತ್ರ ಅಥವ ಡ್ರೆಸ್ ಕೋಡ್ ನಿರ್ಧಾರವಾಗಿತ್ತು. ಆದ್ರೆ ಮೊದಲಿಗೆ ವಕೀಲರು ವಾದ ಮಂಡಿಸುವಾದ ಗುಲಾಬಿ ಬಣ್ನದ ಗೌನ್ ಧರಿಸುತ್ತಿದ್ದರು. ಇನ್ನೂ ಆ ಕಾಲದಲ್ಲಿ ನ್ಯಾಯಾಧೀಶರು ಒಂದು ದೊಡ್ಡ ಬಿಳಿ ಬಣ್ಣದ ವಿಗ್ ಗಳನ್ನ ಧರಿಸುತ್ತಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚಾ ವಿಚಾರಗಳ ಬಳಿಕ ಕಪ್ಪು ಕೋಟ್ ಧರಿಸುವ ತೀರ್ಮಾನವನ್ನ ಬ್ರಟೀಷರ ಕಾಲದಲ್ಲಿ ತೆಗೆದುಕೊಳ್ಳಲಾಗಿತ್ತು.
ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!