ಜುಲೈ 31 ರವರೆಗೆ ಅಂತರರಾಷ್ಟ್ರೀಯ ವಿಮಾನಯಾನದ ನಿರ್ಬಂಧ ವಿಸ್ತರಣೆ
ಕಳೆದ 2 ವರ್ಷಗಳಿಂದ ಇಡೀ ವಿಶ್ವ ಕೋವಿಡ್ ಮಹಾಮಾರಿಯ ಸಂಕಷ್ಟಕ್ಕೆ ಸಿಲುಕಿದೆ.. ಈ ನಡುವೆ ವಿಮಾನಯಾನಕ್ಕೂ ನಿರ್ಬಂಧ ಹೇರಲಾಗಿದೆ..
2020ರ ಮಾರ್ಚ್ 23ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನದ ಮೇಲೆ ನಿರ್ಬಂಧ ಹೇರಲಾಗಿದೆ. 2020ರ ಮೇ ತಿಂಗಳಿನಿಂದ ‘ವಂದೇ ಭಾರತ್’ ಯೋಜನೆಯಡಿ ವಿಶೇಷ ವಿಮಾನಗಳು ಸಂಚರಿಸುತ್ತಿವೆ.
ಈ ನಡುವೆ ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜುಲೈ 31 ರವರೆಗೂ ವಿಸ್ತರಿಸಲಾಗಿದೆ. ಈ ಬಗ್ಗೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತಿಳಿಸಿದೆ.
ಈ ನಿಯಮವು ಅನುಮತಿ ಪಡೆದ ಸರಕು ಸಾಗಣೆ ವಿಮಾನಗಳ ಸಂಚಾರಕ್ಕೆ ಅನ್ವಯವಾಗುವುದಿಲ್ಲ. ನಿರ್ದಿಷ್ಟ ಪ್ರಕರಣಗಳ ಆಧಾರದಲ್ಲಿ ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ.








